ವಿಟ್ಲ: ಮಾದಕ ದ್ರವ್ಯ ಸಾಗಾಟ ➤ ಓರ್ವ ಅರೆಸ್ಟ್, ಮತ್ತೋರ್ವ ಪರಾರಿ

(ನ್ಯೂಸ್ ಕಡಬ) newskadaba.com ವಿಟ್ಲ, ಮಾ. 16. ಮಾದಕ ದ್ರವ್ಯ ಸಾಗಾಟ ಮಾಡುತ್ತಿದ್ದ ಓರ್ವನನ್ನು ಬಂಧಿಸಿದ್ದು, ಮತ್ತೋರ್ವ ಪರಾರಿಯಾಗಿರುವ ಘಟನೆ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಂಧಿತನನ್ನು ಬೆಳ್ತಂಗಡಿ ತಾಲೂಕು ಸೂರ್ಯ ಪಡ್ಡಾಯಿ ನಿವಾಸಿ ಅಬ್ದುಲ್ ಅಜೀಜ್ (30) ಎಂದು ಗುರುತಿಸಲಾಗಿದೆ. ವಿಟ್ಲ ಮೂಲದ ಬ್ಲೇಡ್ ಸಾದಿಕ್ ಎಂಬಾತ ಪರಾರಿಯಾದ ಆರೋಪಿ. ಬಂಧಿತ ಆರೋಪಿಯಿಂದ 7.1 ಗ್ರಾಂ ಎಂಡಿಎಂಎ ಹಾಗೂ 11,000 ರೂ. ನಗದು, ಒಂದು ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೋರ್ವ ಆರೋಪಿ ಬ್ಲೇಡ್ ಸಾದಿಕ್ ಗಾಗಿ ಪೊಲೀಸರು ಬಲೆಬೀಸಿದ್ದಾರೆ.

error: Content is protected !!

Join the Group

Join WhatsApp Group