ಯುವಕನ ಹೊಟ್ಟೆಯಲ್ಲಿತ್ತು 56 ಶೇವಿಂಗ್ ಬ್ಲೇಡ್‌ ಗಳು

(ನ್ಯೂಸ್ ಕಡಬ)newskadaba.com ಜೋಧಪುರ, ಮಾ.16. ರಕ್ತವಾಂತಿ ಮಾಡುತ್ತಿದ್ದ ಯುವಕನೊಬ್ಬನನ್ನು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿ ಶಸ್ತ್ರಚಿಕಿತ್ಸೆ ನಡೆಸಿದ ವೇಳೆ ಆತನ ಹೊಟ್ಟೆಯೊಳಗೆ 56 ಶೇವಿಂಗ್ ಬ್ಲೇಡ್ ತುಂಡುಗಳು ಪತ್ತೆಯಾದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.


ಜಲೋರ್ನ ಸಂಚೋರ್ ಪ್ರದೇಶದಲ್ಲಿ ಘಟನೆ ನಡೆದಿದೆ. ಯುವಕ ಯಶ್ಪಾಲ್ ವಿಪರೀತ ರಕ್ತವಾಂತಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.ಈ ವೇಳೆ ಡಾ. ನರಸಿ ರಾಮ್ ದೇವಸಿ ಅವರು ಯುವಕನಿಗೆ ಎಕ್ಸ್‌ರೇ ಬಳಿಕ ಸೋನೋಗ್ರಫಿ ನಡೆಸಿದರು. ಈ ವೇಳೆ ಆತನ ಹೊಟ್ಟೆಯಲ್ಲಿ ಶೇವಿಂಗ್ ಬ್ಲೇಡ್ ತುಂಡುಗಳಿರುವುದು ಪತ್ತೆಯಾಗಿದೆ. ಬಳಿಕ ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಿ 56 ಶೇವಿಂಗ್ ಬ್ಲೇಡ್ ತುಂಡುಗಳನ್ನು ಹೊರ ತೆಗೆದಿದ್ದಾರೆ.

Also Read  ಹಿಜಾಬ್ ಧರಿಸಿದ ಮಹಿಳೆಗೆ ಬೆನ್ನಟ್ಟಿ ಕಿರುಕುಳ ನೀಡಿದ ಯುವಕರು     ➤ ದೂರು ದಾಖಲು

error: Content is protected !!
Scroll to Top