ಸುಳ್ಯ: ಲಾಡ್ಜ್ ವೊಂದರಲ್ಲಿ ವೇಶ್ಯಾವಾಟಿಕೆ ದಂಧೆ ಆರೋಪ ➤ ಪೊಲೀಸ್ ದಾಳಿ

(ನ್ಯೂಸ್ ಕಡಬ) newskadaba.com ಸುಳ್ಯ, ಮಾ. 16. ಗಾಂಧಿನಗರದಲ್ಲಿ ಕಾರ್ಯಚರಿಸುತ್ತಿರುವ ಲಾಡ್ಜ್ ಒಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಆರೋಪದಡಿ ಬುಧವಾರದಂದು ಸಂಜೆ ಸುಳ್ಯ ಪೊಲೀಸರು ಲಾಡ್ಜಿಗೆ ದಾಳಿ ನಡೆಸಿದ ಘಟನೆ ವರದಿಯಾಗಿದೆ.

ಈ ಲಾಡ್ಜ್ ನಲ್ಲಿ ಮೊದಲಿನಿಂದಲೇ ವೇಶ್ಯಾವಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಈ ಮೊದಲೇ ಕೇಳಿಬರುತ್ತಿದ್ದು, ಇದರ ಸತ್ಯಾ ಸತ್ಯತೆಯನ್ನು ತಿಳಿಯಲು ಹಿಂದೂ ಸಂಘಟನೆಯವರು ನಡೆಸಿದ ಕಾರ್ಯಾಚರಣೆಯಲ್ಲಿ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ. ತಮ್ಮದೇ ಸಂಘಟನೆಯ ಓರ್ವ ಕಾರ್ಯಕರ್ತನನ್ನು ಲಾಡ್ಜಿಗೆ ಗ್ರಾಹಕರಂತೆ ಕಳುಹಿಸಿ ಬಳಿಕ ಲಾಡ್ಜ್ ನಲ್ಲಿ ಹುಡುಗಿಯರ ಬಗ್ಗೆ ಕೇಳಿದಾಗ ಸ್ಥಳಕ್ಕೆ ಇಬ್ಬರು ಯುವತಿಯರು ಬಂದಿದ್ದು, ಕೂಡಲೇ ಸಂಘಟನೆಯ ಕಾರ್ಯಕರ್ತ ತಮ್ಮ ಸಂಘಟನೆಯ ಮುಖಂಡರಿಗೆ ಹಾಗೂ ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ‌ ಈ ಹಿನ್ನೆಲೆ ಲಾಡ್ಜ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು, ಸ್ಥಳದಲ್ಲಿದ್ದ ಇಬ್ಬರು ಯುವತಿಯರನ್ನು ಮತ್ತು ಲಾಡ್ಜ್ ಮಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿರುವುದಾಗಿ ತಿಳಿದು ಬಂದಿದೆ.

Also Read  ಎಂಡಿಎಂಎ ಮಾದಕ ವಸ್ತು ಮಾರಾಟ - ಮಾದಕವಸ್ತು ಸಹಿತ ಆರೋಪಿಗಳು ಅಂದರ್

error: Content is protected !!
Scroll to Top