ಮಂಗಳೂರು: ಬಸ್ ನಿಲ್ದಾಣದಲ್ಲಿ ಸಿಕ್ಕಿದ್ದ ಮಗು ಮೃತ್ಯು

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.16. ಸ್ಟೇಟ್ ಬ್ಯಾಂಕ್ ಸಮೀಪದ ಸರ್ವೀಸ್ ಬಸ್ ನಿಲ್ದಾಣದಲ್ಲಿ ಹೆತ್ತವರಿಂದ ಪರಿತ್ಯಕ್ತಕೊಂಡು ತೀವ್ರ ಅಸ್ವಸ್ಥ ಸ್ಥಿತಿಯಲ್ಲಿ ಸಿಕ್ಕಿದ್ದ ಗಂಡು ಮಗುಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ ಎನ್ನಲಾಗಿದೆ.

ಸರ್ವೀಸ್ ಬಸ್ ನಿಲ್ದಾಣದ ಹೈಮಾಸ್ಟ್ ದೀಪದ ಕಟ್ಟೆಯಲ್ಲಿ ರಾತ್ರಿ 7 ರ ಹೊತ್ತಿಗೆ ಮಗುವನ್ನು ಬಿಟ್ಟು ಪೋಷಕರು ಹೋಗಿದ್ದರು. ಶಿಶುವಿನ ತುರ್ತು ಚಿಕಿತ್ಸೆ ಅವಶ್ಯಕತೆ ಇದ್ದುದರಿಂದ ವೆನ್ಲಾಕ್ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ಇದುವರೆಗೆ ತಂದೆ ತಾಯಿ ನೋಡಲು ಬಂದಿಲ್ಲ. ಅವರ ಮಾಹಿತಿ ಇದ್ದಲ್ಲಿ ತಿಳಿಸುವಂತೆ ಪಾಂಡೇಶ್ವರ ಠಾಣೆ ಪೊಲೀಸರು ತಿಳಿಸಿದ್ದಾರೆ.

Also Read  ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ► ಎರಡು ದಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

 

 

error: Content is protected !!
Scroll to Top