ರೈಲು ಹತ್ತುವ ವೇಳೆ ಚಿನ್ನಾಭರಣ ಕಳವು ➤ ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಮಣಿಪಾಲ, ಮಾ. 15. ರೈಲು ಹತ್ತುವ ಸಂಧರ್ಭದಲ್ಲಿ ವ್ಯಾನಿಟಿ ಬ್ಯಾಗ್ ನಿಂದ ಸುಮಾರು 4 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪಾಲ ಪೋಲಿಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಇಬ್ಬರು ಮಹಿಳೆಯರನ್ನು  ಬಂದಿಸಿದ್ದಾರೆ.

ಬಂಧಿತರನ್ನು ಶಿವಮೊಗ್ಗ ಜಿಲ್ಲೆಯ ಲಲಿತಾ ಬೋವಿ (41) ಮತ್ತು ಭದ್ರಾವತಿಯ ಸುಶೀಲಮ್ಮ (64) ಎಂದು ಗುರುತಿಸಲಾಗಿದೆ. ಮಾರ್ಚ್ 14 ರಂದು ಪುನೀತ್ ವಸಂತ್ ಹೆಗ್ಡೆ ಎಂಬವರು ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ತಮ್ಮ ಕುಟುಂಬದವರೊಂದಿಗೆ ಮಂಗಳೂರು – ಮುಂಬಯಿ ನಡುವೆ ಸಂಚರಿಸುವ ರೈಲು ಹತ್ತುವ ವೇಳೆ ಬಂಗಾರದ ಒಡವೆಗಳನ್ನು ವ್ಯಾನಿಟಿ ಬ್ಯಾಗ್ ನಲ್ಲಿ ಇಟ್ಟಿದ್ದರು. ಇಂದ್ರಾಳಿ ರೈಲು ನಿಲ್ದಾಣದಿಂದ ರೈಲು ಹೊರಟಾಗ ವ್ಯಾನಿಟಿ ಬ್ಯಾಗ್ ನ ಜಿಪ್ ತೆರೆದಿರುವುದು ಪುನೀತ್ ಅವರ ಗಮನಕ್ಕ ಬಂದಿದ್ದು, ಬ್ಯಾಗ್ ನ ಒಳಗಿದ್ದ ಸುಮಾರು ನಾಲ್ಕು ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳ ಕವರ್ ಕಾಣೆಯಾಗಿತ್ತು,  ಈ ಕುರಿತು ಮಣಿಪಾಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣ ದಾಖಲಾದ ತಕ್ಷಣವೇ ಆರೋಪಿಗಳ ಪತ್ತೆಗೆ ಬಲೆಬೀಸಿದ ಮಣಿಪಾಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರ ನೇತೃತ್ವದ ತಂಡವು ರೈಲ್ವೇ ನಿಲ್ದಾಣಕ್ಕೆ ಭೇಟಿ ನೀಡಿ ರೈಲ್ವೆ ಪೊಲೀಸರ ಸಹಕಾರದೊಂದಿಗೆ ಸಿಸಿಟಿವಿ ದ್ರಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳ ಮಾಹಿತಿ ಪಡೆದು ಅದರ ಆಧಾರದ ಮೇಲೆ ತಕ್ಷಣ ಕಾರ್ಯಾಚರಣೆ ನಡೆಸಿ ಘಟನೆ ನಡೆದ 8 ಗಂಟೆಗಳ ಒಳಗೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

Also Read  ಕರೋಪಾಡಿ ಗ್ರಾ.ಪಂ. ಉಪಚುನಾವಣೆ ► ದುಷ್ಕರ್ಮಿಗಳಿಗೆ ಬಲಿಯಾದ ಜಲೀಲ್ ಕರೋಪಾಡಿಯವರ ಸಹೋದರನಿಗೆ ಜಯ

error: Content is protected !!
Scroll to Top