(ನ್ಯೂಸ್ ಕಡಬ) newskadaba.com. ಚೆನ್ನೈ.ಮಾ. 15. ಕಾಂಚೀಪುರಂ ಜಿಲ್ಲೆಯಲ್ಲಿ ದೇವಸ್ಥಾನದ ಉತ್ಸವದ ಸಂದರ್ಭದಲ್ಲಿ ಎತ್ತಿನ ಗಾಡಿಯಲ್ಲಿ ಇರಿಸಲಾಗಿದ್ದ ಜನರೇಟರ್‌ಗೆ ಕೂದಲು ಸಿಲುಕಿ 13 ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ನಡೆದಿದೆ. ಸಂತ್ರಸ್ತೆಯನ್ನು ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿನಿ ಎಸ್ ಲಾವಣ್ಯ ಎಂದು ಗುರುತಿಸಲಾಗಿದೆ.
ಲಾವಣ್ಯ ಮೂರು ವರ್ಷಗಳ ಹಿಂದೆ ತಾಯಿಯನ್ನು ಕಳೆದುಕೊಂಡಿದ್ದು, ಆಕೆಯ ಕಿರಿಯ ಸಹೋದರ ಭುವನೇಶ್ (9) ತಮ್ಮ ಅಜ್ಜ-ಅಜ್ಜಿಯಾದ ಕಾಂದೀಪನ್ ಮತ್ತು ಲತಾ ಅವರೊಂದಿಗೆ ವಾಸಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಗ್ರಾಮದಲ್ಲಿ ದೇವಸ್ಥಾನದ ಉತ್ಸವ ಇದ್ದ ಕಾರಣ ದೇವತೆಯಿದ್ದ ರಥವನ್ನು ಜನರು ಎಳೆಯುತ್ತಿರುವಾಗ, ಡೀಸೆಲ್ ಜನರೇಟರ್ ಹೊಂದಿದ್ದ ಎತ್ತಿನ ಬಂಡಿಯನ್ನು ರಥದ ಹಿಂಭಾಗದಲ್ಲಿ ಇರಿಸಲಾಗಿತ್ತು. ಮಕ್ಕಳು ಜನರೇಟರ್ ಸುತ್ತಲೂ ಜಮಾಯಿಸಿದ್ದು, ‘ರಾತ್ರಿ 10 ಗಂಟೆ ಸುಮಾರಿಗೆ ಜನರೇಟರ್ ಬಳಿ ಕುಳಿತಿದ್ದ ಲಾವಣ್ಯ ಅವರ ಕೂದಲು ಜನರೇಟರ್‌ಗೆ ಸಿಕ್ಕಿ ಹಾಕಿಕೊಂಡಿದೆ. ಲೌಡ್ ಸ್ಪೀಕರ್‌ಗಳಿಂದ ಕಾರಣ ಸಹಾಯಕ್ಕಾಗಿ ಲಾವಣ್ಯ ಅವರು ಕೂಗಿಕೊಂಡರೂ ಯಾರಿಗೂ ಕೇಳಿಸಿಲ್ಲ. ನಂತರ, ಜನರೇಟರ್ ಸುಮ್ಮನಾಗಿದೆ. ಬಂಡಿಯಲ್ಲಿನ ದೀಪಗಳು ಆಫ್ ಆಗಿವೆ. ನಂತರ ಕಿರುಚಾಟ ಕೇಳಿದ ಜನರು ಸಹಾಯಕ್ಕೆ ಧಾವಿಸಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಮೃತ ಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.