(ನ್ಯೂಸ್ ಕಡಬ) newskadaba.com ಪುಣೆ, ಮಾ. 15. ಪುಣೆ ನಗರದ ಪೊಲೀಸರು ಪಾಕಿಸ್ತಾನ ಮೂಲದ 2015ರಿಂದ ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಆರೋಪಿಯನ್ನು ಮುಹಮ್ಮದ್ ಅಮನ್ ಅನ್ಸಾರಿ (22) ಎಂದು ಗುರುತಿಸಲಾಗಿದ್ದು ಈತ ಪ್ರಸ್ತುತ ಭವಾನಿ ಪೇಠದಲ್ಲಿ ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈತ ನಕಲಿ ದಾಖಲೆಗಳನ್ನು ಸಲ್ಲಿಸಿ ಅದನ್ನು ಪುಣೆಯಿಂದ ದುಬೈಗೆ ಪ್ರಯಾಣಿಸಲು ಬಳಸುತ್ತಿದ್ದ ಎನ್ನಲಾಗಿದೆ.
ಪುಣೆ ನಗರ ಪೊಲೀಸ್ ವಿಶೇಷ ಶಾಖೆಯ ಪಾಕಿಸ್ತಾನಿ ನಿವಾಸಿಗಳ ಪರಿಶೀಲನಾ ಕೋಶದ ಪೊಲೀಸ್ ಪೇದೆ ಕೇದಾರ್ ಜಾಧವ್ ಅವರು ಮಂಗಳವಾರ ಖಡಕ್ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿದ್ದಾರೆ