ರೈಲು ಹತ್ತುವ ವೇಳೆ ಮಹಿಳೆಯ ಬ್ಯಾಗ್ ನಲ್ಲಿದ್ದ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಎಗರಿಸಿದ ಕಳ್ಳರು

(ನ್ಯೂಸ್ ಕಡಬ) newskadaba.com ಮಣಿಪಾಲ, ಮಾ. 15. ರೈಲು ನಿಲ್ದಾಣದಲ್ಲಿ ರೈಲು ಹತ್ತುವ ಸಂದರ್ಭ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಬಂಗಾರದ ಒಡವೆಗಳನ್ನು ಎಗರಿಸಿದ ಕುರಿತು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುನೀತ ವಸಂತ್ ಹೆಗ್ಡಯವರು ತಮ್ಮ ಕುಟುಂಬದೊಂದಿಗೆ ಮುಂಬಯಿಗೆ ಹೋಗಲೆಂದು ಮಾ.14 ರಂದು ಮಂಗಳೂರು – ಮುಂಬಯಿ ಎಕ್ಸ್ ಪ್ರೆಸ್ ರೈಲು ನಂಬರ್- 12134 ರಲ್ಲಿ ಹತ್ತಿದ್ದು, ಈ ವೇಳೆ ತಮ್ಮ ವ್ಯಾನಿಟಿ ಬ್ಯಾಗ್ ನಲ್ಲಿ ಬಂಗಾರದ ಒಡವೆಗಳನ್ನು ಒಂದು ಕವರ್ ನಲ್ಲಿ ಹಾಕಿ ಬಟ್ಟೆಗಳ ಮಧ್ಯೆ ಇಟ್ಟು ಬ್ಯಾಗನ್ನು ಹೆಗಲಿನಲ್ಲಿ ಹಾಕಿಕೊಂಡಿದ್ದರು. ರೈಲು ಹೊರಟ ವೇಳೆ ಸೀಟ್ ನಲ್ಲಿ ಕುಳಿತ ಪುನೀತ ಅವರಿಗೆ ತನ್ನ ಹೆಗಲಿನಲ್ಲಿದ್ದ ವ್ಯಾನಿಟಿ ಬ್ಯಾಗ್ ನ ಝಿಫ್ ತೆರೆದಿರುವುದು ಕಂಡು ಬಂದಿದ್ದು, ಬ್ಯಾಗ್ ಪರಿಶೀಲಿಸಿದಾಗ ಬ್ಯಾಗ್ ನ ಒಳಗೆ ಇಟ್ಟಿದ್ದ ಬಂಗಾರದ ಒಡೆವೆಗಳ ಕವರ್ ಕಾಣೆಯಾಗಿತ್ತು. ರೈಲು ನಿಲ್ದಾಣದಲ್ಲಿ ರೈಲು ಹತ್ತುವ ಸಮಯ ಯಾರೋ ಕಳ್ಳರು ವ್ಯಾನಿಟಿ ಬ್ಯಾಗ್ ನಲ್ಲಿದ್ದ ಬಂಗಾರದ ಒಡವೆಗಳು ಹಾಗೂ ವ್ಯಾಚ್ ನ್ನು ಕಳವು ಮಾಡಿದ್ದಾರೆ. ಕಳವಾದ ಚಿನ್ನಾಭರಣಗಳ ಅಂದಾಜು ತೂಕ 100 ಗ್ರಾಂ ಆಗಿದ್ದು, ಇದರ ಅಂದಾಜು ಮೌಲ್ಯ 4,00,000 ಆಗಿರುತ್ತದೆ, ಹಾಗೂ ಕಳುವಾದ ವ್ಯಾಚ್ ನ ಅಂದಾಜು ಬೆಲೆ 3000 ಆಗಿರುತ್ತದೆ, ಕಳುವಾದ ಸ್ವತ್ತುಗಳ ಒಟ್ಟು ಮೌಲ್ಯ 4,03,000 ರೂಪಾಯಿ ಆಗಿರುತ್ತದೆ. ಈ ಕುರಿತು ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಕರ್ನಾಟಕ ಸಮಸ್ತ ಬಾಖವಿ ಉಲಮಾ ಒಕ್ಕೂಟ ನೂತನ ಸಮಿತಿ ರಚನೆ

error: Content is protected !!
Scroll to Top