ಯಾರಿಗೂ ತಿಳಸದೆ ಮನೆಗೆ ತಲುಪಿದ ದೀಪಕ್ ರಾವ್ ಮೃತದೇಹ ► ರಸ್ತೆಯಲ್ಲೇ ಮೃತದೇಹವನ್ನಿಟ್ಟು ಗೃಹ ಸಚಿವರು ಬರಬೇಕೆಂದು ಪ್ರತಿಭಟನಾಕಾರರಿಂದ ಆಕ್ರೋಶ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.04. ಬುಧವಾರದಂದು ಕಾಟಿಪಳ್ಳದ ಕೈಕಂಬದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್‌ ರಾವ್‌ ಮೃತದೇಹವನ್ನು ಪೊಲೀಸರು ಪೊಲೀಸರು ಯಾರಿಗೂ ತಿಳಿಸದೆ ಮೃತರ ಮನೆಗೆ ಆಂಬ್ಯುಲೆನ್ಸ್ ಮೂಲಕ ತಂದಿದ್ದು, ಮನೆಯಲ್ಲಿ ನೆರೆದಿದ್ದವರ ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯುತ್ತಿದೆ.

ಆಸ್ಪತ್ರೆಯ ಮುಂಭಾಗದಲ್ಲಿ ಹೂವಿನಿಂದ ಅಲಂಕರಿಸಿದ್ದ ವಾಹನದೊಂದಿಗೆ ಶವಯಾತ್ರೆ ನಡೆಸಲು ಸಾವಿರಾರು ಹಿಂದೂ ಸಂಘಟನೆ ಕಾರ್ಯಕರ್ತರು ಸಜ್ಜಾಗಿದ್ದರು‌. ಆದರೆ ಎ.ಜೆ. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿ ಇಡಲಾಗಿದ್ದ ಶವವನ್ನು ಹಿಂಬಾಗಿಲಿನಿಂದ ಯಾರಿಗೂ ಹೇಳದೆ ಮನೆಗೆ ರವಾನಿಸಲಾಗಿದೆ. ಆದರೆ ಮನೆಯ ಎದುರು ಜಮಾಯಿಸಿದ್ದ ಸಾವಿರಾರು ಮಂದಿ ಅಂಬುಲೆನ್ಸ್‌ ತಡೆದು ಶವವನ್ನು ಆಸ್ಪತ್ರೆಗೆ ವಾಪಾಸ್‌ ತೆಗೆದುಕೊಂಡು ಹೋಗುವಂತೆ ಪಟ್ಟು ಹಿಡಿದಿದ್ದಾರೆ. ಪೊಲೀಸರ ಈ ನಡೆ ಹಿಂದೂ ಸಂಘಟನೆಗಳು, ಬಿಜೆಪಿ ಮತ್ತು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

Also Read  ಭೂಗತ ಪಾತಕಿ ರವಿ ಪೂಜಾರಿ ಸಹಚರನ ಬಂಧನ

ದೀಪಕ್ ರಾವ್ ಮೃತದೇಹ ಎಜೆ ಆಸ್ಪತ್ರೆಯ ಆಂಬ್ಯಲೆನ್ಸ್ ನಲ್ಲಿದೆ. ಮೃತದೇಹವನ್ನು ಇಳಿಸಲು ಪ್ರತಿಭಟನಾಕಾರರು ಬಿಡುತ್ತಿಲ್ಲ. ಪರಿಸ್ಥಿತಿ ಹದಗೆಟ್ಟಿದ್ದು, ಗೃಹ ಸಚಿವ ರಾಮಲಿಂಗ ರೆಡ್ಡಿಯವರು ಸ್ಥಳಕ್ಕೆ ಬರಬೇಕೆಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ. ಮೆರವಣಿಗೆ ನಡೆಸಲು ಅವಕಾವ ನೀಡದೆ ಇರುವುದು ಹಿಂದೂ ವಿರೋಧಿ ನೀತಿಯಾಗಿದೆ . ಕಾಂಗ್ರೆಸ್‌ ಸರ್ಕಾರದ ಆದೇಶದಂತೆ ಕಾನೂನನ್ನೂ ಮೀರಿ ಪೊಲೀಸರು ನಡೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

error: Content is protected !!
Scroll to Top