ತಾಪಮಾನ ತಗ್ಗಿಸಲು ಗಿಡ ನೆಡುವುದೊಂದೇ ದಾರಿ ➤ ಶ್ರೀ ಮಾಧವ ಉಳ್ಳಾಲ್

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 15. ಇತ್ತೀಚಿನ ದಿನಗಳಲ್ಲಿ ಪರಿಸರದ ತಾಪಮಾನ ದಿನೇ ದಿನೇ ಹೆಚ್ಚುತ್ತಿದೆ. ಕಾಡು ಬರಿದಾಗಿ ಗಿಡ ಮರ ನಾಶವಾಗಿ ದೈನಂದಿನ ವಾತಾವರಣದ ಉಷ್ಣತೆ 40ಕ್ಕೆ ತಲುಪುತ್ತಿದೆ. ಇದು ಬಹಳ ಅಪಾಯಕಾರಿ ಬೆಳವಣಿಗೆ. ರಾತ್ರಿ ಚಳಿ ಇದ್ದರೂ ಹಗಲು ಹೊತ್ತು ಅಸಹನೀಯವಾದ ಸೆಖೆ ಇರುತ್ತದೆ. ಈ ರೀತಿ ವಾತಾವರಣದ ವೈಪರೀತ್ಯ ಮಾನವನ ಆರೋಗ್ಯಕ್ಕೆ ಮಾರಕ. ತಕ್ಷಣವೇ ನಾವೆಲ್ಲಾ ಎಚ್ಚೆತ್ತು ಗಿಡ ಮರ ಉಳಿಸಿ, ಬೆಳೆಸಬೇಕು. ಹೆಚ್ಚುತ್ತಿರುವ ತಾಪಮಾನ ತಗ್ಗಿಸಲು ಗಿಡ ನೆಡುವುದೊಂದೇ ದಾರಿ ಎಂದು ಖ್ಯಾತ ಪರಿಸರ ಪ್ರೇಮಿ ಶ್ರೀ ಮಾಧವ ಉಳ್ಳಾಲ್ ಅವರು ಅಭಿಪ್ರಾಯ ಪಟ್ಟರು.

ದ.ಕ ಜಿಲ್ಲಾ ಗೃಹರಕ್ಷಕದಳ ಮತ್ತು ಪೌರರಕ್ಷಣಾ ಪಡೆಯ ವತಿಯಿಂದ ನಗರದ ಮೇರಿಹಿಲ್ ನಲ್ಲಿರುವ ಗೃಹರಕ್ಷಕದಳ ಕಛೇರಿ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟು ಮಂಗಳೂರನ್ನು ಹಣ್ಣಿನ ನಗರಿಯನ್ನಾಗಿಸುವ ನೂತನ ಅಭಿಯಾನಕ್ಕೆ ಶ್ರೀ ಮಾಧವ ಉಳ್ಳಾಲ್ ಅವರು ಚಾಲನೆ ನೀಡಿದರು. ನೇರಳೆ, ನಕ್ಷತ್ರ ನೇರಳೆ ಮತ್ತು ಜಂಬು ನೇರಳೆ ಗಿಡಗಳನ್ನು ಕಛೇರಿಯ ಎದುರು ನೆಡಲಾಯಿತು. ದ.ಕ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟ ಡಾ|| ಮುರಲೀ ಮೋಹನ್ ಚೂಂತಾರು ಅವರು ಈ ಕಾರ್ಯಕ್ರಮಕ್ಕೆ ಸಾಥ್ ನೀಡಿದರು. ಮಂಗಳೂರು ನಗರದ ಚೀಫ್ ಟ್ರಾಫಿಕ್ ವಾರ್ಡನ್ ಶ್ರೀ ಸುರೇಶ್ ನಾಥ್, ಕಛೇರಿಯ ಅಧೀಕ್ಷಕಿ ಶ್ರೀಮತಿ ಕವಿತಾ ಕೆ.ಸಿ, ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಅನಿತಾ ಟಿ.ಎಸ್, ಗೃಹರಕ್ಷಕಿಯರಾದ ಸುಲೋಚನಾ, ಶುಭ, ನತಾಲಿಯ, ಸೆಲೆಸ್ಟಿನ್, ಮರಿಯಾ, ಸುಮಿತ್ರಾ, ಚಂಪಾ, ಜಯಲಕ್ಷ್ಮಿ, ರಂಜನಿ, ದಿವಾಕರ್ ಮುಂತಾದವರು ಉಪಸ್ಥಿತರಿದ್ದರು.

Also Read  ಮಗನಿಗೆ ಕೊರೋನಾ ದೃಢ ➤ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೌಕರನಿಗೆ ಹೋಂ ಕ್ವಾರಂಟೈನ್

error: Content is protected !!
Scroll to Top