ಭಾರತೀಯ ಸೇನೆಯಿಂದ ನಿವೃತ್ತಿ ಹೊಂದಿ ತಾಯ್ನಾಡಿಗೆ ಮರಳಿದ ಸುಬೇದಾರ್ ಹೊನ್ನಪ್ಪ ಗೌಡ ಕಟ್ಟ

(ನ್ಯೂಸ್ ಕಡಬ) newskadaba.com ಕಡಬ, ಮಾ. 14. ಭಾರತೀಯ ಸೇನೆಯ ಮದ್ರಾಸ್ ರೆಜಿಮೆಂಟ್ ನ 11ನೇ ಬೆಟಾಲಿಯನ್ ನಲ್ಲಿ ಸುಬೇದಾರ್ ಆಗಿದ್ದ ಹೊನ್ನಪ್ಪ ಗೌಡ ಕಟ್ಟ ಮನೆ ಇವರು ಸುದೀರ್ಘ 28 ವರ್ಷಗಳ ಸೇವೆ ಸಲ್ಲಿಸಿ ಫೆ. 28ರಂದು ನಿವೃತ್ತಿಗೊಂಡು ತಾಯ್ನಾಡಿಗೆ ಆಗಮಿಸಿದ್ದಾರೆ.


ಮೂಲತಃ ಏನೆಕಲ್ಲು ಗ್ರಾಮದ ಕಟ್ಟ ಮನೆ ದಿ. ನೋಣಪ್ಪ ಗೌಡ, ದಿ. ಸೀತಮ್ಮ ದಂಪತಿಯ ಪುತ್ರ, ಪ್ರಸ್ತುತ ಕಡಬ ತಾಲೂಕು ಕೋಡಿಂಬಾಳ ಗ್ರಾಮದಲ್ಲಿ ವಾಸವಾಗಿರುವ ಹೊನ್ನಪ್ಪ ಗೌಡರು, 1995 ಫೆ. 24ರಂದು ಸೇನೆಗೆ ನೇಮಕಗೊಂಡು, ವೆಲ್ಲಿಂಗ್ಟನ್ ಹಾಗೂ ನೀಲಗಿರಿಯಲ್ಲಿ ಸೇನಾ ತರಬೇತಿಯನ್ನು ಪಡೆದರು. ಬಳಿಕ ಜಮ್ಮು ಕಾಶ್ಮೀರ, ಮಣಿಪುರ, ನಾಗಲ್ಯಾಂಡ್, ರಾಜಸ್ತಾನ್, ಕಾಶ್ಮೀರದ ಸಿಯಾಚಿನ್, ಗ್ಲೀಸಿಯರ್, ರಾಂಚಿ, ಸಿಖಂದರಾಬಾದ್, ಹಿಮಾಚಲ ಪ್ರದೇಶ ಹಾಗೂ ಅಸ್ಸಾಂಗಳಲ್ಲಿ ಕರ್ತವ್ಯ ನಿರ್ವಹಿಸಿ ಕೇರಳದ ತಿರುವನಂತಪುರದಲ್ಲಿ ಕರ್ತವ್ಯ ನಿರ್ವಹಿಸಿ ಈಗ ನಿವೃತ್ತಿ ಹೊಂದಿದ್ದಾರೆ. ಇವರು ಸುದೀರ್ಘ 28 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ಬಾನಡ್ಕ, ಏನೆಕಲ್ಲು ಹಾಗೂ ಸುಬ್ರಹ್ಮಣ್ಯ ಎಸ್.ಎಸ್.ಪಿ.ಯು. ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದರು. ಪ್ರಸ್ತುತ ಹೊನ್ನಪ್ಪ ಗೌಡರು ಪತ್ನಿ ಗೀತಾ ಮಕ್ಕಳಾದ ಸ್ವೀಕೃತ್, ಸೃಷ್ಟಿ ಅವರೊಂದಿಗೆ ಕೋಡಿಂಬಾಳ ಗ್ರಾಮದ ಕಲ್ಲಂತಡ್ಕ ಎಂಬಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ.

Also Read  ವೆನ್‍ಲಾಕ್‍ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ

error: Content is protected !!
Scroll to Top