ರಾಮಕುಂಜ ಮತ್ತು ಕೊಯಿಲ ಗ್ರಾ.ಪಂ. ವ್ಯಾಪ್ತಿ         ➤ ಬಿಜೆಪಿ ಮುಖಂಡರಿಂದ ಗೋಳಿತ್ತಡಿ- ಏಣಿತ್ತಡ್ಕ ರಸ್ತೆಯ ತೇಪೆ ಕಾರ್ಯ ಪರಿಶೀಲನೆ       

(ನ್ಯೂಸ್ ಕಡಬ)newskadaba.com ಕಡಬ, ಮಾ.14. ತಾಲೂಕಿನ ರಾಮಕುಂಜ ಮತ್ತು ಕೊಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಗೋಳಿತ್ತಡಿ- ಏಣಿತ್ತಡ್ಕ ರಸ್ತೆಯ ನೆಲ್ಯೋಟ್ಟ ಎಂಬಲ್ಲಿಂದ ತ್ರಿವೇಣಿ ಸರ್ಕಲ್ ತನಕ ನಡೆಯುವ ತೇಪೆ ಕಾರ್ಯವನ್ನು  ಬಿಜೆಪಿ ಮುಖಂಡರು, ಜನಪ್ರತಿನಿದಿಗಳು ಪರಿಶೀಲನೆ ನಡೆಸಿದರು ಎನ್ನಲಾಗಿದೆ.

ಗೋಳಿತ್ತಡಿಯಿಂದ ನೆಲ್ಯೊಟ್ಟು ತನಕ ಈಗಾಗಲೇ  ಶಾಸಕರ ಅನುದಾನದಲ್ಲಿ ಸುಮಾರು 4 ಲಕ್ಷ ರೂ ವೆಚ್ಚದಲ್ಲಿ ತೇಪೆ ಕಾರ್ಯ ಮುಗಿದಿದ್ದು ಬಳಿಕದ   ರಸ್ತೆ ತೇಪೆ ಕಾರ್ಯಕ್ಕೆ ಕ್ಷೇತ್ರದ ಶಾಸಕ ,ಸಚಿವ ಎಸ್ ಅಂಗಾರ ಶಿಪಾರಿಸ್ಸಿನ ಮೇರೆಗೆ ಜಿಲ್ಲಾ ಪಂಚಾಯಿತಿಯಿಂದ ಸುಮಾರು 2ಲಕ್ಷ ಅನುದಾನದ ಬಿಡುಗಡೆಗೊಳಿಸಿ ಕಾಮಗಾರಿ ನಡೆಯುತ್ತಿದೆ.  ಪರಿಶೀಲನೆ ವೇಳೆ ಕೊಯಿಲ ಗ್ರಾಮ ಪಂಚಾಯಿತಿ ಸದಸ್ಯರಾದ ಚಿದಾನಂದ ಪಾನ್ಯಾಲು, ಯತೀಶ್ ಸೀಗೆತ್ತಡಿ,  ಪುಷ್ಪಾ , ಭಾರತಿ,  ಕಡಬ ತಾಲೂಕು ಪಂಚಾಯತ್ ಮಾಜಿ  ಸದಸ್ಯೆ ಜಯಂತಿ ಅರ್ ಗೌಡ , ಬಿಜೆಪಿ ಮುಖಂಡರಾದ ಸುಭಾಶ್ ಶೆಟ್ಟಿ, ಸುದೀಶ್ ಪಟ್ಟೆ, ಉದಯ ಕುಮಾರ್ ಏಣಿತ್ತಡ್ಕ ಮೊದಲಾದವರು ಇದ್ದರು.

Also Read  ಮಂಗಳೂರು: ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಗರ್ಭಿಣಿಯಾಗಿದ್ದ ಹುಡುಗಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರಥಮ ದರ್ಜೆ

 

error: Content is protected !!
Scroll to Top