ಹಾವೇರಿ ಗರ್ಭಿಣಿ ನಾಯಿಗೆ ರಕ್ತದಾನ ಮಾಡಿದ ಮತ್ತೊಂದು ನಾಯಿ

(ನ್ಯೂಸ್ ಕಡಬ) newskadaba.com. ಹಾವೇರಿ.   ಮಾ 14.  ಹಾವೇರಿ ಜಿಲ್ಲೆಯ ಅಕ್ಕಿಆಲೂರು ಪಟ್ಣಣದಲ್ಲಿ ಲ್ಯಾಬ್ರಡಾರ್ ಜಾತಿಗೆ ಸೇರಿದ ಗರ್ಭಿಣಿ ನಾಯಿಯ ಪ್ರಾಣ ಉಳಿಸಲು ಮೊತ್ತೊಂದು ನಾಯಿ ರಕ್ತದಾನ ಮಾಡಿದೆ. ಆಶ್ಚರ್ಯವಾದರು ಸತ್ಯ. ಲ್ಯಾಬ್ರಡಾರ್ ಜಾತಿಗೆ ಸೇರಿದ ಜಿಪ್ಸಿ ಎಂಬ ಹೆಸರಿನ ನಾಯಿ ಎರಡು ತಿಂಗಳ ಗರ್ಭಿಣಿ. ಇದು ಕಳೆದ 5 ದಿನಗಳಿಂದ ಆಹಾರ ಸೇವಿಸುತ್ತಿರಲಿಲ್ಲ.

ಈ ಸಂಬಂಧ ನಾಯಿ ಮಾಲಿಕ ನಿಖಿಲ್ ಹಡಲಗಿ, ಜಿಪ್ಸಿಯನ್ನು ಕರೆದುಕೊಂಡು ಪಶುವೈದ್ಯರ  ಬಳಿ ಹೋದರು. ಆಗ ವೈದ್ಯರು ನಾಯಿಯ ದೇಹಲ್ಲಿ ಹಿಮೋಗ್ಲೋಬಿನ್ ಕಡಿಮೆಯಾಗಿ ಬಳಲುತ್ತಿದೆ, ಕೂಡಲೆ ರಕ್ತ ಹಾಕಬೇಕು ಎಂದು ಹೇಳಿದ್ದಾರೆ. ಆಗ ನಿಖಿಲ್​ ವೈಭವ ಪಾಟೀಲ್​ ಅವರನ್ನು ಸಂಪರ್ಕಿಸಿದರು. ಇವರು ಕೂಡ ಲ್ಯಾಬ್ರಡಾರ್ ಜಾತಿಗೆ ಸೇರಿದ ಜಿಮ್ಮಿ ಹೆಸರಿನ ಗಂಡು ನಾಯಿ ಸಾಕಿದ್ದು, ಜಿಪ್ಸಿಗೆ ರಕ್ತದಾನ ಮಾಡಲು ಒಪ್ಪಿಕೊಂಡರು. ಬಳಿಕ ವೈದ್ಯರು ಯಶಸ್ವಿಯಾಗಿ ರಕ್ತ ವರ್ಗಾವಣೆ ​ಮಾಡಿದರು. ಈಗ ಜಿಪ್ಸಿ ಆರೋಗ್ಯವಾಗಿದೆ.

error: Content is protected !!

Join the Group

Join WhatsApp Group