(ನ್ಯೂಸ್ ಕಡಬ)newskadaba.com ನವದೆಹಲಿ, ಮಾ.14. ಭಾರತದಲ್ಲಿ ಕಾಡುತ್ತಿರುವ ಇನ್‌ಫ್ಲುಯೆಂಜಾ ಎ ಸಬ್‌ಟೈಪ್ ಎಚ್3ಎನ್2(H3N2) ವೈರಸ್ ಜೊತೆಗೆ ಹಂದಿ ಜ್ವರ ಅಥವಾ ಎಚ್1ಎನ್1(H1N1) ವೈರಸ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ತಿಳಿಸಿದೆ.
ಅಂಕಿಅಂಶಗಳ ಪ್ರಕಾರ, ಫೆಬ್ರವರಿವರೆಗೆ ಒಟ್ಟು 955 ಎಚ್1ಎನ್1 ಸೋಂಕುಗಳು ವರದಿಯಾಗಿದ್ದು, ತಮಿಳುನಾಡು (545), ಮಹಾರಾಷ್ಟ್ರ (170), ಗುಜರಾತ್ (74), ಕೇರಳ (72), ಮತ್ತು ಪಂಜಾಬ್ (28) ನಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.