ಮಾ. 21ರಿಂದ ಅನಿರ್ದಿಷ್ಟಾವಧಿ ಮುಷ್ಕರ ಘೋಷಿಸಿದ ರಾಜ್ಯ ಸಾರಿಗೆ ನೌಕರರ ಸಂಘ ➤ ಬಸ್ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 14. ನೌಕರರಿಗೆ 6ನೇ ವೇತನ ಆಯೋಗ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾರ್ಚ್ 21 ರ ಬೆಳಿಗ್ಗೆ 6 ರಿಂದ ಕೆ.ಆರ್ ಟಿಸಿ ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿಯು ಅನಿರ್ದಿಷ್ಟ ಮುಷ್ಕರಕ್ಕೆ ಕರೆ ನೀಡಿರುವುದರಿಂದ ಮುಂದಿನ ದಿನಗಳಲ್ಲಿ ಕರ್ನಾಟಕದಾದ್ಯಂತ ಬಸ್ ಕಾರ್ಯಾಚರಣೆಗೆ ಸ್ಥಗಿತವಾಗುವ ಸಾಧ್ಯತೆ ಇದೆ.

ಕೆಎಸ್‌ಆರ್ಟಿಸಿಯ 35,013 ನೌಕರರ ಪೈಕಿ 15,000 ಕ್ಕೂ ಹೆಚ್ಚು ನೌಕರರನ್ನು ಪ್ರತಿನಿಧಿಸುವುದಾಗಿ ಹೇಳಿಕೊಂಡಿರುವ ಕೆಎಸ್‌ಆರ್ಟಿಸಿ ನೌಕರರ ಕೂಟವು ಮಾರ್ಚ್ 24 ರಿಂದ ಅನಿರ್ದಿಷ್ಟ ಮುಷ್ಕರಕ್ಕೆ ಕರೆ ನೀಡಿತ್ತು. ಆರ್ಟಿಸಿ ನೌಕರರಿಗೆ 6 ನೇ ವೇತನ ಆಯೋಗವನ್ನು ಜಾರಿಗೆ ತರುವುದು ಇದರ ಪ್ರಮುಖ ಬೇಡಿಕೆಯಾಗಿದೆ.

Also Read  3ನೇ ಬಾರಿ ತೇರ್ಗಡೆಯಾಗಿ ಐಎಎಸ್ ಅಧಿಕಾರಿಯಾದ  ಜಯಂತ್ ನಹತಾ

 

error: Content is protected !!
Scroll to Top