ಸೇತುವೆಗೆ ಢಿಕ್ಕಿ ಹೊಡೆದು ಉರುಳಿ ಬಿದ್ದ ಬಸ್ ➤ 20ಕ್ಕೂ ಅಧಿಕ ಮಂದಿಗೆ ಗಾಯ..!

(ನ್ಯೂಸ್ ಕಡಬ) newskadaba.com ದಾವಣಗೆರೆ, ಮಾ. 14. ಖಾಸಗಿ ಬಸ್ ಉರುಳಿ ಬಿದ್ದ ಪರಿಣಾಮ ಸುಮಾರು 20ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ದಾವಣಗೆರೆ ನಗರದ ಹೊರ ವಲಯದ ಬೇತೂರ ರಸ್ತೆಯಲ್ಲಿ ನಡೆದಿದೆ.


ಖಾಸಗಿ ಬಸ್ ದಾವಣಗೆರೆಯಿಂದ ಜಗಳೂರು ಕಡೆ ಹೋಗುತ್ತಿದ್ದು, ಬೇತೂರು ರಸ್ತೆ ದಾಟಿ ಮುಂದೆ ಬರುತ್ತಿದ್ದಂತೆ ಸಣ್ಣ ಹಳ್ಳಕ್ಕೆ ಕಟ್ಟಲಾದ ಸೇತುವೆಗೆ ಬಸ್ ಢಿಕ್ಕಿಯಾಗಿದೆ. ಇನ್ನು ಸ್ಥಳೀಯರು ಪ್ರಯಾಣಿಕರ ರಕ್ಷಣೆಗೆ ಆಗಮಿಸಿದ್ದು, ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.

Also Read  ರಾಷ್ಟ್ರೀಯ ಹೆದ್ದಾರಿಗೆ ಉರುಳಿ ಬಿದ್ದ ಮರ- ವಾಹನ ಸಂಚಾರಕ್ಕೆ ತಡೆ

error: Content is protected !!
Scroll to Top