(ನ್ಯೂಸ್ ಕಡಬ) newskadaba.com ನವದೆಹಲಿ. ಮಾ. 14. ಇಂದಿನ ದಿನಗಳಲ್ಲಿ ಹೆಚ್ಚಾಗಿ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಬಳಸುತ್ತೇವೆ. ಅದರಲ್ಲೇ ತಿಂಗಳುಗಳ ಕಾಲ ನೀರನ್ನು ಕುಡಿಯುತ್ತೇವೆ. ಕೆಲವೊಮ್ಮೆ ಅದನ್ನು ಸ್ವಚ್ಛಗೊಳಿಸುವುದೇ ಇಲ್ಲ, ಹಾಗೆಯೇ ಮೇಲೆ ಮೇಲೆ ನೀರಿನಿಂದ ತೊಳೆದು ಬಿಡುತ್ತೇವೆ.
ಅಧ್ಯಯನವೊಂದರಲ್ಲಿ ಈ ಬಗ್ಗೆ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿದ್ದು, ವರದಿಯ ಪ್ರಕಾರ ಮರುಬಳಕೆ ಮಾಡಬಹುದಾದ ನೀರಿನ ಬಾಟಲಿಯಲ್ಲಿ ಲಕ್ಷಾಂತರ ಮಾರಕ ಬ್ಯಾಕ್ಟೀರಿಯಾಗಳು ಇರುತ್ತವೆ. ಅಮೆರಿಕದ ವಾಟರ್ ಫಿಲ್ಟರ್ ಗುರು ಎಂಬ ಸಂಸ್ಥೆ ಈ ವರದಿಯನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ, ಮರುಬಳಕೆ ಮಾಡಬಹುದಾದ ನೀರಿನ ಬಾಟಲಿಯು ಟಾಯ್ಲೆಟ್ ಸೀಟ್‌ಗಿಂತ 40,000 ಪಟ್ಟು ಹೆಚ್ಚು ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ ಎಂದು ತಿಳಿದು ಬಂದಿದೆ.