(ನ್ಯೂಸ್ ಕಡಬ) newskadaba.com. ಬೆಂಗಳೂರು.ಮಾ. 14. ಕೊರೊನಾ ಅರ್ಭಟ ತಣ್ಣಗಾದ ಬಳಿಕ ಮತ್ತೆ ಐಟಿ ಉದ್ಯೋಗಿಗಳು ಆಫೀಸ್ ಗೆ ಬಂದು ಕೆಲಸ ಮಾಡೋದಕ್ಕೆ ಶುರುವಾಗಿದ್ದೇ ತಡ. ಇತ್ತ ಮನೆ ಮಾಲೀಕರು ಬಾಡಿಗೆ ಮನೆಗಳಿಗೆ ಮತ್ತೆ ಬೆಲೆ ಏರಿಕೆ ಮಾಡಿದ್ದಾರೆ.
ರಾಜಧಾನಿ ಬೆಂಗಳೂರಿಗೆ ಅದೆಷ್ಟೋ ಮಂದಿ ಕೆಲಸ ಅರಸಿಕೊಂಡು ಬರುವವರೇ ಆಗಿದ್ದು, ಅದರಲ್ಲೂ ಇದೀಗ ಕೊರೊನಾ ಸೋಂಕಿನ ಬಳಿಕ, ನಗರದಲ್ಲಿ ಐಟಿ ಕಂಪನಿಗಳು ಮತ್ತೆ ಗರಿಗೆದರಿದ್ದು, ಉದ್ಯೋಗಿಗಳನ್ನು ಆಫೀಸ್‌ಗೆ ಬಂದು ಕೆಲಸ ಮಾಡುವಂತೆ ಆದೇಶ ಹೊರಡಿಸಿದೆ ಈ ನಿಟ್ಟಿನಲ್ಲಿ ಮತ್ತೆ ಬೆಂಗಳೂರಿಗೆ ಬರುವವರ ಸಂಖ್ಯೆ ಭಾರೀ ಹೆಚ್ಚಳವಾಗಿದೆ. ಅದರಲ್ಲೂ 2021ಕ್ಕೆ ಹೋಲಿಸಿದರೆ 2023ರಲ್ಲಿ ಸರಾಸರಿ ಬಾಡಿಗೆ ಶೇ. 15 ರಿಂದ 20 ರಷ್ಟು ಹೆಚ್ಚಳಗೊಂಡಿದ್ದು ದುಬಾರಿ ಬಾಡಿಗೆ ಕೊಡುವ ಬದಲು, ಹೊಸ ಅಪಾರ್ಟ್‍ಮೆಂಟ್ ಖರೀದಿಸುವುದೇ ಉತ್ತಮ ಎನ್ನುವಂತಾಗಿದೆ.