ಕಾಟಿಪಳ್ಳ: ಯುವಕನ ಬರ್ಬರ ಕೊಲೆ ಪ್ರಕರಣ ► ಮುಲ್ಕಿ ನೌಷಾದ್ ತಂಡದ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.03. ಬುಧವಾರದಂದು ಹಾಡುಹಗಲೇ ಕಾಟಿಪಳ್ಳದಲ್ಲಿ ನಡೆದ ದೀಪಕ್ ರ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಮುಲ್ಕಿ ನೌಷಾದ್, ರಿಝ್ವಾನ್, ಪಿಂಕಿ ನವಾಝ್ ಹಾಗೂ ನಿರ್ಷಾನ್ ಎಂದು ಗುರುತಿಸಲಾಗಿದೆಯೆಂದು ದೃಶ್ಯ ಮಾಧ್ಯಮವೊಂದು ವರದಿ ಮಾಡಿದೆ. ಇವರು ಕೊಲೆ ನಡೆಸಿ ಕಾರಿನಲ್ಲಿ ಪರಾರಿಯಾಗುತ್ತಿದ್ದಾಗ ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದ ಹಿನ್ನಲೆಯಲ್ಲಿ ದುಷ್ಕರ್ಮಿಗಳಿದ್ದ ಕಾರನ್ನು ಪತ್ತೆಹಚ್ಚಿದ ಸುರತ್ಕಲ್ ಹಾಗೂ ಮುಲ್ಕಿ ಠಾಣೆಯ ಪೊಲೀಸರು, ದುಷ್ಕರ್ಮಿಗಳ ಕಾರನ್ನು ಬೆನ್ನತ್ತಿದ್ದರು.

ಮುಲ್ಕಿ – ಮೂಡಬಿದಿರೆ ಮಾರ್ಗವಾಗಿ ಸಾಗುತ್ತಿದ್ದ ದುಷ್ಕರ್ಮಿಗಳಿದ್ದ ಕಾರನ್ನು ಬೆನ್ನಟ್ಟಿದ್ದ ಪೊಲೀಸರು, ಕಾರು ನಿಲ್ಲಿಸುವಂತೆ ಸೂಚನೆ ನೀಡಿದ್ದರೂ ದುಷ್ಕರ್ಮಿಗಳು ಪರಾರಿಯಾಗಲು ಯತ್ನಿಸಿದಾಗ ಮಿಜಾರು ಎಂಬಲ್ಲಿ ದುಷ್ಕರ್ಮಿಗಳಿದ್ದ ಕಾರಿನ ಮೇಲೆ ಪೊಲೀಸರು ಸಿನಿಮಾ ಶೈಲಿಯಲ್ಲಿ ಗುಂಡು ಹಾರಿಸಿ ಆರೋಪಿಗಳನ್ನು ಬಂಧಿಸಿದ್ದರು.

error: Content is protected !!
Scroll to Top