ಬಾವಿಯಲ್ಲಿ ಹತ್ತು ವರ್ಷದ ಬಾಲಕನ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ಮಾ. 14. ಹತ್ತು ವರ್ಷದ ಬಾಲಕನ ಮೃತದೇಹ ಬಾವಿಯಲ್ಲಿ ಮೃತ ಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಪನತ್ತಡಿ ಸಮೀಪದ ಚಾಮುಂಡಿ ಕುನ್ನು ಎಂಬಲ್ಲಿ ನಡೆದಿದೆ.


ಮೃತ ಬಾಲಕನನ್ನು ಪ್ರಭಾಕರ ಎಂಬವರ ಪುತ್ರ 5ನೇ ತರಗತಿ ವಿದ್ಯಾರ್ಥಿ ಅರ್ಜುನ್ (10) ಎಂದು ಗುರುತಿಸಲಾಗಿದೆ. ದಿಢೀರ್ ನಾಪತ್ತೆಯಾಗಿದ್ದ ಬಾಲಕನನ್ನು ಮನೆಯವರು ಹಾಗೂ ಪರಿಸರ ವಾಸಿಗಳು ಶೋಧ ನಡೆಸಿದಾಗ ಆವರಣ ಇಲ್ಲದ ಬಾವಿಯಲ್ಲಿ ಬಿದ್ದಿರುವುದು ಕಂಡು ಬಂದಿದ್ದು, ಕೂಡಲೇ ಮೇಲಕ್ಕೆತ್ತಿ ಆಸ್ಪತ್ರೆಗೆ ತಲಪಿಸಿದರೂ ಅದಾಗಲೇ ಮೃತಪಟ್ಟಿದ್ದನು ಎನ್ನಲಾಗಿದೆ.

Also Read  ಕಡಬ: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಅಕ್ರಮ ದನ ಸಾಗಾಟ ಮಾಡುತ್ತಿದ್ದ ಕಾರು ಢಿಕ್ಕಿ ಪ್ರಕರಣ - ಆರೋಪಿ ಪೊಲೀಸ್ ವಶಕ್ಕೆ..?

error: Content is protected !!
Scroll to Top