ಕಸಾಪ ವತಿಯಿಂದ ವಿವಿಧ ಕೃತಿಗಳಿಗೆ ದತ್ತಿ ಪ್ರಶಸ್ತಿ ಪ್ರದಾನ ➤ ಡಾ|| ದಾಮ್ಲೆ, ಡಾ|| ದೀಪಾ ಫಡ್ಕೆ, ಸ್ಮಿತಾ ಅಮೃತರಾಜ್, ಡಾ|| ಮುರಲೀಮೋಹನ ಚೂಂತಾರು ಅವರ ಕೃತಿಗೆ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 14. ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ 2021ನೇ ಸಾಲಿನ ವಿವಿಧ ಕೃತಿಗಳಿಗೆ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ವಿವಿಧ  ದತ್ತಿಗಾಗಿ  49 ವಿಭಾಗಕ್ಕೆ ಆಯ್ಕೆಯಾದ  53 ಕೃತಿಗಳಿಗೆ  ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುಳ್ಯದ ಹಿರಿಯ ಸಾಹಿತಿ ಡಾ|| ಚಂದ್ರಶೇಖರ ದಾಮ್ಲೆ, ಬರಹಗಾರ್ತಿ ಡಾ|| ದೀಪಾ ಫಡ್ಕೆ, ಲೇಖಕಿ ಸ್ಮಿತಾ ಅಮೃತರಾಜ್, ಡಾ|| ಮುರಲೀಮೋಹನ್ ಚೂಂತಾರು, ಬಿ. ಸತ್ಯವತಿ ಎಸ್. ಭಟ್ ಕೊಳಚಪ್ಪು, ರಾಜಶ್ರೀ ರೈ ಪೆರ್ಲ, ಡಾ|| ಎಚ್.ಜೆ. ಶ್ರೀಧರ್ ಅವರ ಕೃತಿಗಳು ಪ್ರಶಸ್ತಿಗೆ ಆಯ್ಕೆಯಾಗಿದೆ. ಮಾರ್ಚ್ 12 ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿರುವ ಶ್ರೀ ಕೃಷ್ಣರಾಜ ಪರಿಷತ್ತಿನ  ಮಂದಿರದಲ್ಲಿ ನಡೆದ ಸಮಾರಂಭವನ್ನು ಬೆಂಗಳೂರು ಉತ್ತರ ವಿವಿ ಕುಲಪತಿ ಡಾ|| ನಿರಂಜನ ವಾನಳ್ಳಿ ಉದ್ಘಾಟಿಸಿದರು. ಕನ್ನಡ  ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ, ಡಾ|| ಮಹೇಶ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಮಂತ್ರಿಗಳ ಕಾರ್ಯದರ್ಶಿ ಜಯರಾಂ ರಾಯಪುರ, ಹಿರಿಯ ಸಾಹಿತಿ ಪ್ರೊ. ಕಾಳೇ ಗೌಡ ನಾಗವಾರ ಉಪಸ್ಥಿತರಿದ್ದರು.

Also Read  ಕಡಬ: ಹಳ್ಳಕ್ಕೆ ಬಿದ್ದು ಮೇಲೆದ್ದು ಬರಲು ಪರದಾಡಿದ ಕಾಡಾನೆ

ಡಾ|| ಚಂದ್ರಶೇಖರ ದಾಮ್ಲೆ ಅವರ ‘ನನ್ನ ಮಗಳು ತುಂಟಿ ಅಲ್ಲಾ’ ಕೃತಿಗೆ ಡಾ|| ಎ.ಎಸ್. ಧರಣೇಂದ್ರಯ್ಯ-ಮನೋ ವಿಜ್ಞಾನ ದತ್ತಿ ಪ್ರಶಸ್ತಿ, ದೀಪಾ ಫಡ್ಕೆ ಅವರ ‘ಮುಂದಣ ಹೆಜ್ಜೆ’ ಕೃತಿಗೆ ಡಾ|| ವೀಣಾ ಶಾಂತೇಶ್ವರ ದತ್ತಿ ಪ್ರಶಸ್ತಿ, ಸ್ಮಿತಾ ಅಮೃತ್‍ರಾಜ್ ಸಂಪಾಜೆ  ಅವರ ‘ನೆಲದಾಯ ಪರಿಮಳ’ ಕೃತಿಗೆ ಗೌರಮ್ಮ ಹರ್ನಳ್ಳಿ ಕೆ. ಮಂಜಪ್ಪ ದತ್ತಿ ಪ್ರಶಸ್ತಿ, ಡಾ|| ಮುರಲೀಮೋಹನ್ ಚೂಂತಾರು ಅವರ ‘ಸಂಗಾತಿ’ ಕೃತಿಗೆ  ಬಿಸಿಲೇರಿ ಬ್ರದರ್ಸ್ ದತ್ತಿ ಪ್ರಶಸ್ತಿ ದೊರೆತಿದೆ.

Also Read  ಬೆಳ್ತಂಗಡಿ: ಭಾರತೀಯ ಜನತಾ ಪಕ್ಷದ ವತಿಯಿಂದ ಮೆರವಣಿಗೆ

error: Content is protected !!
Scroll to Top