ಮರ್ದಾಳ: ಕೃಷಿಕರಿಗೆ ಉಚಿತ ತರಕಾರಿ ಬೀಜ ವಿತರಣೆ

(ನ್ಯೂಸ್ ಕಡಬ) newskadaba.com ಕಡಬ, ಜೂ.18. ವಿಜಯ ಬ್ಯಾಂಕ್ ಪ್ರವರ್ತಿತ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ಕೃಷಿಕರಿಗೆ ಉಚಿತ ತರಕಾರಿ ಬೀಜ ವಿತರಣೆ ಹಾಗೂ ಮಾಹಿತಿ ಕಾರ್ಯಕ್ರಮವು ಮರ್ದಾಳದಲ್ಲಿ ಜರಗಿತು.

ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯ ಹೆಗ್ಡೆ ಅವರು ಮಾತನಾಡಿ, ಸಮಾಜ ಸೇವೆಯ ಉದ್ದೇಶದಿಂದ ವಿಜಯ ಬ್ಯಾಂಕ್ ಆರಂಭಿಸಿರುವ ಪ್ರತಿಷ್ಠಾನವು ಕಳೆದ ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಹೊಲಿಗೆ ತರಬೇತಿ ಕೇಂದ್ರ, ಗೃಹೋಪಯೋಗಿ ವಸ್ತುಗಳ ತಯಾರಿಕಾ ತರಬೇತಿ, ರಬ್ಬರ್ ಟ್ಯಾಪಿಂಗ್ ತರಬೇತಿ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಪರಿಸರ, ಅರಣ್ಯ ಸಂರಕ್ಷಣೆ, ಜಲ ಮರುಪೂರಣ, ಶಿಕ್ಷಣ ಕ್ಷೇತ್ರ ಹಾಗೂ ಕೃಷಿ ಚಟುವಟಿಕೆಗಳಿಗೆ ಪೂರಕವಾದ ಹಲವು ಕಾರ್ಯಕ್ರಮಗಳನ್ನು ಕೂಡ ನಡೆಸಲಾಗಿದೆ ಎಂದರು. ಪ್ರತಿಷ್ಠಾನದ ಕಾರ್ಯದರ್ಶಿ ಬೆಳ್ಳಿಪ್ಪಾಡಿ ರಾಜೇಂದ್ರ ರೈ ಅವರು ಮಾತನಾಡಿ ಆರ್ಥಿಕ ವ್ಯವಹಾರದ ವಿಚಾರದಲ್ಲಿ ಜನರ ಒಡನಾಡಿಯಾಗಿ ಹೆಸರು ಮಾಡಿರುವ ವಿಜಯ ಬ್ಯಾಂಕ್ ಪ್ರತಿಷ್ಠಾನದ ಮೂಲಕ ಸೇವಾ ಚಟುವಟಿಕೆಗಳನ್ನು ನಡೆಸುವ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗಿದೆ ಎಂದರು.
ಮರ್ಧಾಳ ಗ್ರಾ.ಪಂ. ಅಧ್ಯಕ್ಷೆ ಲಲಿತಾ ರೈ, ಪುತ್ತೂರು ಎಪಿಎಂಸಿ ಸದಸ್ಯ ಮೇದಪ್ಪ ಗೌಡ ಡೆಪ್ಪುಣಿ, ವಿಜಯ ಬ್ಯಾಂಕ್ ಮರ್ದಾಳ ಶಾಖಾ ಪ್ರಬಂಧಕ ರಿತೇಶ್ ಶ್ರೀವಾಸ್ತವ ಅವರು ಮಾತನಾಡಿದರು. ಗ್ರಾ.ಪಂ. ಸದಸ್ಯ ದಾಮೋದರ ಗೌಡ ಡೆಪ್ಪುಣಿ, ಅಭಿವೃದ್ಧಿ ಅಧಿಕಾರಿ ವೆಂಕಟ್ರಮಣ ಗೌಡ, ಲೆಕ್ಕ ಸಹಾಯಕ ಭುವನೇಂದ್ರ ಕುಮಾರ್, ಪ್ರಮುಖರಾದ ಮೋಹನ ಗೌಡ ಪಂಜೋಡಿ, ಮಹಮ್ಮದ್ ಕೆ.ಎಸ್., ಬಾಲಕೃಷ್ಣ ಗೌಡ ಮರ್ದಾಳ, ಪುರಂದರ ರೈ, ಗುಡ್ಡಪ್ಪ ಗೌಡ, ಖಾದರ್, ಗಂಗಾಧರ, ಸತೀಶ್ ರೈ, ದುಗ್ಗಣ್ಣ ಗೌಡ ಮುಂತಾದವರು ಹಾಜರಿದ್ದರು.

error: Content is protected !!
Scroll to Top