2023 ನಾಟು ನಾಟು ಹಾಡಿಗೆ ಕೋಟಿ ಕೋಟಿ ಬೆಟ್ಟಿಂಗ್ ಕಟ್ಟಿದ ಸೆಲೆಬ್ರಿಟಿಗಳು

(ನ್ಯೂಸ್ ಕಡಬ) newskadaba.com. ಬೆಂಗಳೂರು. ಮಾ. 13. ನಾಟು ನಾಟು ಹಾಡು ಆಸ್ಕರ್ ಗೆಲ್ಲೋದು ಗ್ಯಾರೆಂಟಿ ಎನ್ನುವುದು ಜನರ ನಂಬಿಕೆ ಆಗಿತ್ತು. ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿಗಾಗಿ ಇಡೀ ಭಾರತವೇ ಪ್ರಾರ್ಥಿಸುತ್ತಿತ್ತು.

ಮತ್ತೊಂದೆಡೆ, ಈ ಹಾಡು ಆಸ್ಕರ್ ಗೆಲ್ಲುತ್ತಾ? ಇಲ್ಲವಾ ಎನ್ನುವ ಬಗ್ಗೆ ಜೋರಾಗಿ ಬೆಟ್ಟಿಂಗ್ ನಡೆದೆದಿದೆ. ಆನ್ಲೈನ್ ಪ್ಲಾಟ್ಫಾರ್ಮ ನಲ್ಲಿ ಕೋಟಿಗಟ್ಟಲೆ ಹಣ ಕಟ್ಟಿರುವ ವರದಿ ಆಗಿದೆ. ಭಾರತದ ಪ್ರಮುಖ ನಗರಗಳಾದ ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಆನ್ಲೈನ್ ಬುಕ್ಕಿಗಳು 1:4 ರ ರೇಂಜ್ ನಲ್ಲಿ  ಕೋಟಿಗಳಲ್ಲಿ ಬೆಟ್ಟಿಂಗ್ ಮಾಡಿದ್ದಾರೆ ಎನ್ನಲಾಗ್ತಿದೆ.

Also Read  ನಡು ರಸ್ತೆಯಲ್ಲೇ ಹೊತ್ತಿ ಉರಿದ ಶಾಲಾ ವಿದ್ಯಾರ್ಥಿಗಳಿದ್ದ‌ ಬಸ್ ► ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

ಐಪಿಎಲ್ ಸೀಸನ್, ಮಹತ್ವದ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದ ಬೆಟ್ಟಿಂಗ್ ಇದೀಗ ಅವಾರ್ಡ್ ವಿಚಾರದಲ್ಲೂ ಭಾರೀ ಸದ್ದು ಮಾಡಿದೆ. ಹಿಂದೆಂದೂ ಕಾಣದಷ್ಟು ಈ ಬಾರಿ ಆಸ್ಕರ್ ಸಮಾರಂಭದಲ್ಲಿ ಬೆಟ್ಟಿಂಗ್ ನಡೆದಿದೆ ಎಂದು ತಿಳಿದು ಬಂದಿದೆ.

error: Content is protected !!
Scroll to Top