ಕಾಟಿಪಳ್ಳ: ಯುವಕನ ಕೊಲೆ ಪ್ರಕರಣ ► ಕಾರಿಗೆ ಗುಂಡು ಹಾರಿಸಿ ಸಿನಿಮೀಯ ಶೈಲಿಯಲ್ಲಿ ಆರೋಪಿಗಳ ಸೆರೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.03. ಸುರತ್ಕಲ್ ಹಾಗೂ ಮುಲ್ಕಿ ಪೊಲೀಸರು ನಡೆಸಿದ ಮಿಂಚಿನ ಕಾರ್ಯಾಚರಣೆಯಿಂದ ಬುಧವಾರ ಹಾಡುಹಗಲೇ ಕಾಟಿಪಳ್ಳದಲ್ಲಿ ನಡೆದ ಯುವಕನ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಬುಧವಾರದಂದು ಹಾಡುಹಗಲೇ ಕಾಟಿಪಳ್ಳದಲ್ಲಿ ದೀಪಕ್ ರನ್ನು ನಾಲ್ವರು ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಿತ್ತು. ಕಾರಿನಲ್ಲಿ ಪರಾರಿಯಾಗುತ್ತಿದ್ದ ದುಷ್ಕರ್ಮಿಗಳನ್ನ ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದ ಹಿನ್ನಲೆಯಲ್ಲಿ ದುಷ್ಕರ್ಮಿಗಳಿದ್ದ ಕಾರನ್ನ ಪತ್ತೆಹಚ್ಚಿದ ಸುರತ್ಕಲ್ ಹಾಗೂ ಮುಲ್ಕಿ ಠಾಣೆಯ ಪೊಲೀಸರು , ದುಷ್ಕರ್ಮಿಗಳ ಕಾರನ್ನು ಬೆನ್ನತ್ತಿದ್ದರು.

ಮುಲ್ಕಿ ಮೂಡಬಿದಿರೆ ಮಾರ್ಗವಾಗಿ ಸಾಗುತ್ತಿದ್ದ ದುಷ್ಕರ್ಮಿಗಳಿದ್ದ ಕಾರನ್ನ ಬೆನ್ನಟ್ಟಿದ್ದ ಪೊಲೀಸರು, ಕಾರು ನಿಲ್ಲಿಸುವಂತೆ ಸೂಚನೆ ನೀಡಿದ್ದರೂ ದುಷ್ಕರ್ಮಿಗಳು ಪರಾರಿಯಾಗಲು ಯತ್ನಿಸಿದಾಗ ಮಿಜಾರು ಎಂಬಲ್ಲಿ ದುಷ್ಕರ್ಮಿಗಳಿದ್ದ ಕಾರಿನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ನಂತರ ಕಾರನ್ನು ಅಡ್ಡಗಟ್ಟಿದ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಇದರಲ್ಲಿ ಓರ್ವನ ಕಾಲಿಗೆ ಗುಂಡು ತಗುಲಿ ಗಾಯಗಳಾಗಿವೆ ಎನ್ನಲಾಗಿದ್ದು, ಬಂಧಿತರ ಬಗ್ಗೆ ನಿಖರವಾದ ಮಾಹಿತಿಯನ್ನು ಪೊಲೀಸರ ಅಧಿಕೃತವಾಗಿ ಹೊರಹಾಕಿಲ್ಲ.

Also Read  ಅಡಿಕೆ ಬೆಂಬಲ ಬೆಳೆ; ಸರಕಾರಕ್ಕೆ ಪ್ರಸ್ತಾವನೆ – ಜಿಲ್ಲಾಧಿಕಾರಿ

error: Content is protected !!
Scroll to Top