(ನ್ಯೂಸ್ ಕಡಬ) newskadaba.com. ಕುಂದಾಪುರ. ಮಾ 13. ಕುಂದಾಪುರ ತಾಲೂಕು ಬಸ್ರೂರು ಗ್ರಾಮ ಪಂಚಾಯತ್ ಹಿಂಭಾಗದ ಅಶೋಕ ಪಾರ್ಕ್ ಜೀರ್ಣೋದ್ಧಾರ ಕಾರ್ಯವು ಸ್ಧಳೀಯರ ಸಹಕಾರದಲ್ಲಿ ನಡೆಯುತ್ತಿದ್ದು, ಜಾಗ ಸಮತಟ್ಟು ಮಾಡುವ ಸಂದರ್ಭ ಲಿಂಗಮುದ್ರೆ ಕಲ್ಲು ಪತ್ತೆಯಾಗಿದೆ. ಈ ಕಲ್ಲಿನ ಬಗ್ಗೆ ಭಾರತೀಯ ಇತಿಹಾಸ ಸಂಕಲನ ಸಮಿತಿ ಕರ್ನಾಟಕ ಉಡುಪಿ ಜಿಲ್ಲೆಯ ಜಿಲ್ಲಾ ಸಂಚಾಲಕರು ಪ್ರದೀಪ ಕುಮಾರ್ ಬಸ್ರೂರು ಇವರ ಗಮನಕ್ಕೆ ತಂದಿದ್ದರು.
ಕಲ್ಲಿನಲ್ಲಿ ಸೂರ್ಯ,ಚಂದ್ರ,ಶಿವಲಿಂಗ,ನಂದಿ ವಿಗ್ರಹ ಇರುವುದು ಕಂಡು ಬಂದಿದೆ. ಕೆಳದಿಯ ಸ.ಸೂ ನಾಲ್ಕು ನೂರು ವಷ೯ದ ಹಳೆಯ ಲಿಂಗ ಮುದ್ರಿಕೆ ಕಲ್ಲು ಇದಾಗಿದೆ. ಈ ಕಲ್ಲು ಸೂರ್ಯ,ಚಂದ್ರ,ಇರುವ ತನಕ ಅಜರಾಮರವಾಗಿ ಇರಲಿಯೆನ್ನುವಂತ ಸಂದೇಶ ನೀಡುವಂತಿದೆ.
ಈ ಹಿಂದೆ ಶಾಂತಾವರ ವೀರಾಂಜನೇಯ ಅಣತಿ ದೂರದಲ್ಲಿ ವಾಮನ ಮುದ್ರೆ ಕಲ್ಲು,ರಮಾನಂದ ಶೆಟ್ಟಿಗಾರ ಮನೆ ಬಳಿ ಲಿಂಗ ಮುದ್ರೆ ಕಲ್ಲು ಪತ್ತೆಯಾಗಿತ್ತು. “ಇತಿಹಾಸದ ಸಂಭಂದಿಸಿದ ಶಾಸನ,ವೀರಗಲ್ಲು,ವಕೈ ಮಾಸ್ತಿ ಕಲ್ಲು ,ಲಿಂಗ ಮುದ್ರೆ ಕಲ್ಲು ಉಳಿಸುವಲ್ಲಿ ಸಾರ್ವಜನಿಕರ ಸಹಕಾರ ಹಾಗೂ ಉಳಿಸುವಲ್ಲಿ ಸೇವೆ ಅಗತ್ಯವಾಗಿದೆ. ನಮ್ಮ ನಮ್ಮ ಊರಿನಲ್ಲಿ ಇತಿಹಾಸದ ದಾಖಲೆ ಉಳಿಸಬೇಕಾಗಿದೆ” ಎಂದು ಫ್ರೊ.ಟಿ. ಮುರುಗೇಶ್ ಇತಿಹಾಸ ಸಂಶೋಧಕರು ಹೇಳಿದ್ದಾರೆ.