➤ಯುಎಸ್ ಅಭಿವೃದ್ಧಿ ನೀತಿ ಸಮಿತಿಗೆ ಇಬ್ಬರು ಭಾರತೀಯರು ಆಯ್ಕೆ

(ನ್ಯೂಸ್ ಕಡಬ) newskadaba.com. ಅಮೇರಿಕ, ಮಾ 11. ವ್ಯಾಪಾರ ಮತ್ತು ನೀತಿ ಅಭಿವೃದ್ಧಿ ಸಮಿತಿಗೆ ಇಬ್ಬರು ಭಾರತೀಯ-ಅಮೆರಿಕನ್ನರನ್ನು ಅಧ್ಯಕ್ಷ ಜೋಬೈಡನ್ ಆಡಳಿತಕ್ಕೆ ನೇಮಕ ಮಾಡಿ ಆದೇಶ ಹೊರಡಿಸಿದೆ.

ಫ್ಲೆಕ್ಸ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ರೇವತಿ ಅದ್ವೈತಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ರಕ್ಷಣಾ ಮಂಡಳಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಮನೀಶ್ ಬಾಪ್ನಾ ಅವರನ್ನು ವ್ಯಾಪಾರ ನೀತಿ ಮತ್ತು ಮಾತುಕತೆಯ ಸಲಹಾ ಸಮಿತಿಗೆ ನೇಮಿಸಲಾಗಿದೆ.

ಅಮೇರಿಕಾದ ವ್ಯಾಪಾರ ನೀತಿಯ ಅಭಿವೃದ್ಧಿ, ಅನುಷ್ಠಾನ ಮತ್ತು ಆಡಳಿತದ ವಿಷಯಗಳ ಕುರಿತು ಅಮೇರಿಕಾದ ವ್ಯಾಪಾರ ಪ್ರತಿನಿಧಿ ಸಭೆಗೆ ಸಲಹೆ ನೀಡುವ ಸಲಹಾ ಸಮಿತಿಗೆ 14 ಜನರನ್ನು ನೇಮಿಸಿದ್ದು ಅದರಲ್ಲಿ ಇಬ್ಬರು ಭಾರತೀಯ ಮೂಲದವರು ಸೇರಿದ್ದಾರೆ.

error: Content is protected !!
Scroll to Top