ವಿಧಾನ ಸಭಾ ಚುನಾವಣಾ ಹಿನ್ನೆಲೆ: ಕಡಬ ತಾಲೂಕಿನ ಇಬ್ಬರು ಸೇರಿದಂತೆ 11 ಮಂದಿಯ ಗಡಿಪಾರು ಆದೇಶ

(ನ್ಯೂಸ್ ಕಡಬ) newskadaba.com ಕಡಬ, ಮಾ.10. ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಡಬ ತಾಲೂಕಿನ ಇಬ್ಬರು ಸೇರಿದಂತೆ ಒಟ್ಟು 11 ಮಂದಿಯನ್ನು 6 ತಿಂಗಳುಗಳ ಕಾಲ ಜಿಲ್ಲೆಯಿಂದ ಗಡಿಪಾರುಗೊಳಿಸಿ ದ.ಕ. ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಗೋಳ್ತಮಜಲು ಗ್ರಾಮದ ನಝೀರ್, ಬಾಳ್ತಿಲ ಗ್ರಾಮದ ಇಬ್ರಾಹೀಂ ಖಲೀಲ್, ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಬಡಗನ್ನೂರು ಗ್ರಾಮದ ಜಯರಾಜ್ ರೈ, ಪುತ್ತೂರು ನಗರ ಠಾಣಾ ವ್ಯಾಪ್ತಿಯ ಕಬಕ ಗ್ರಾಮದ ನೆಹರೂ ನಗರದ ಇಬ್ರಾಹೀಂ, ಕೆಮ್ಮಿಂಜೆ ಗ್ರಾಮದ ಹಕೀಂ ಕೂರ್ನಡ್ಕ, ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕಡಬ ತಾಲೂಕಿನ ಕುದ್ಮಾರು ಗ್ರಾಮದ ರೋಶನ್, ಸವಣೂರು ಗ್ರಾಮದ ಪ್ರಸಾದ್, ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ನೆಕ್ಕಿಲಾಡಿ ಸಿದ್ದೀಕ್, ಉಪ್ಪಿನಂಗಡಿ ಗ್ರಾಮದ ಉಮೈದ್, ತಸ್ಲೀಂ ಹಾಗೂ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಶಿಶಿಲ ಗ್ರಾಮದ ಕಿರಣ್ ಕುಮಾರ್ ಡಿ. ಅವರನ್ನು ಗಡಿಪಾರು ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ‌.

Also Read  ಪುತ್ತೂರು : ಎಎಸ್ ಐ ಸುಂದರ ಕಾನಾವು ನಿಧನ

 

error: Content is protected !!
Scroll to Top