ಭಾರತವನ್ನು ಪ್ರವೇಶಿಸಿದ ‘ಪಾಕ್’ ಡ್ರೋನ್ ನ್ನು ಹೊಡೆದುರುಳಿಸಿದ ಗಡಿ ಭದ್ರತಾ ಪಡೆ

(ನ್ಯೂಸ್ ಕಡಬ) newskadaba.com ನವದೆಹಲಿ, ಮಾ. 10. ಪಾಕಿಸ್ತಾನದಿಂದ ಭಾರತವನ್ನು ಪ್ರವೇಶಿಸಿದ್ದ ಡ್ರೋನ್ ಅನ್ನು ಪಂಜಾಬ್‌ನ ಗುರುದಾಸ್‌ ಪುರ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಬಿಎಸ್ ಎಫ್ ಹೊಡೆದುರುಳಿಸಿದ ಕುರಿತು ವರದಿಯಾಗಿದೆ.

ಗುರುದಾಸ್‌ ಪುರದ ಹಳ್ಳಿಯೊಂದರ ಬಳಿ ಡ್ರೋನ್ ಹಾರುವ ಶಬ್ದವನ್ನು ಕೇಳಿದ ಭದ್ರತಾ ಸಿಬ್ಬಂದಿಯು, ಗುಂಡು ಹಾರಿಸುವ ಮೂಲಕ ಹೊಡೆದುರುಳಿಸಿದ್ದಾರೆ. ಅಲ್ಲದೇ ಡ್ರೋನ್ ಪತ್ತೆಯಾದ ಪ್ರದೇಶದಲ್ಲಿ ಸೇನಾ ಸಿಬ್ಬಂದಿಗಳು ಶೋಧ ಕಾರ್ಯಾಚರಣೆಯನ್ನು ಕೈಗೊಂಡಿರುವುದಾಗಿ ತಿಳಿದುಬಂದಿದೆ. ಇನ್ನು ಡ್ರೋನ್ ನಲ್ಲಿದ್ದ ಎಕೆ( AK) ಸರಣಿಯ ರೈಫಲ್, ಎರಡು ಮ್ಯಾಗಜೀನ್ ಗಳು ಹಾಗೂ 40 ಬುಲೆಟ್ ಗಳನ್ನು ಸೇನೆಯು ವಶಕ್ಕೆ ಪಡೆದಿದೆ.

Also Read  ➤ಬೀದಿ ನಾಯಿಗಳ ದಾಳಿಗೆ ಸೋದರರು ಬಲಿ

error: Content is protected !!
Scroll to Top