(ನ್ಯೂಸ್ ಕಡಬ)newskadaba.com ಪಣಜಿ, ಮಾ.10. ಸದ್ಯ ರಾಜ್ಯದಲ್ಲಿ ಗೋಡಂಬಿ(ಗೇರು) ಬೆಲೆ ತೀರಾ ಕಡಿಮೆ ಇರುವುದರಿಂದ ಗೋಡಂಬಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆರಂಭದಲ್ಲಿ ಕೆಜಿಗೆ ಕೇವಲ 123 ರೂ. ರಷ್ಟಿದೆ. ಗೋವಾದ ಸ್ಥಳೀಯ ಗೋಡಂಬಿ ಬೆಳೆಗಾರರು ವಿದೇಶದಿಂದ ಗೋಡಂಬಿ ಆಮದನ್ನು ನಿಲ್ಲಿಸಬೇಕು ಅಥವಾ ಆಮದು ಮೇಲಿನ ತೆರಿಗೆಯನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಗೋವಾದಲ್ಲಿ ವಿಪತ್ತು ಸಮತೋಲನ ಕಾಯಿದೆ ಜಾರಿಯಲ್ಲಿದೆ. ಕೇಂದ್ರ ಸರಕಾರ ಗೋಡಂಬಿ ಬೆಳೆಯನ್ನು ಅಗತ್ಯ ವಸ್ತುಗಳ ಕಾಯಿದೆಯಲ್ಲಿ ಅತ್ಯಗತ್ಯ ವಸ್ತುವನ್ನಾಗಿ ಸೇರಿಸಬೇಕು ಮತ್ತು ಈ ಕುರಿತು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕೇಂದ್ರಕ್ಕೆ ಪತ್ರ ಬರೆಯಬೇಕು ಎಂದು ಗೋವಾದ ಸತ್ತರಿ ತಾಲೂಕಿನ ಗೋಡಂಬಿ ಬೆಳೆಗಾರರು ಇದೀಗ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.