ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ಕಡಬದ ► ಕದಂಬ ಅಟೋ ಚಾಲಕ-ಮಾಲಕರ ಸಂಘದಿಂದ ಸಹಾಯಧನ ಹಸ್ತಾಂತರ

(ನ್ಯೂಸ್ ಕಡಬ) newskadaba.com ಕಡಬ, ಡಿ.02. ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯೋರ್ವರಿಗೆ ಕಡಬದ ಕದಂಬ ಆಟೋ ಚಾಲಕ-ಮಾಲಕ ಸಂಘದಿಂದ ಮಂಗಳವಾರದಂದು ಸಹಾಯಧನವನ್ನು ನೀಡಲಾಯಿತು.

ಹೃದಯಾಘಾತದಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿರುವ ಆರ್ಥಿಕವಾಗಿ ಕಷ್ಟಕರ ಜೀವನವನ್ನು ನಿರ್ವಹಿಸುತ್ತಿದ್ದ ಕಡಬ ತಾಲೂಕು ಕುಟ್ರುಪ್ಪಾಡಿ ಗ್ರಾಮದ ತಲೇಕಿ ಬೈದ್ರಿಜಾಲು ನಿವಾಸಿ ಪೂವಪ್ಪ ಗೌಡರವರ ಚಿಕಿತ್ಸೆಗಾಗಿ ಅವರ ಪತ್ನಿಯವರಿಗೆ ಕಡಬದ ಕದಂಬ ಆಟೋ ಚಾಲಕ-ಮಾಲಕ ಸಂಘದಿಂದ 12500 ನಗದನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಪ್ರಸನ್ನ ಕೆ., ಸದಸ್ಯರಾದ ಜಗದೀಶ್ ರೈ, ಸಿದ್ದೀಕ್ ಮೊದಲಾದವರು ಉಪಸ್ಥಿತರಿದ್ದರು.

Also Read  ಕಡಬದ ಚಾಲಕನ ಕೈಯಲ್ಲಿ ಮೂಡಿ ಬರುತ್ತಿದೆ ಅಡಿಕೆ ಹಿಂಗಾರದ ಹೂಮಾಲೆ..! ➤ ಅಪರೂಪದ ಕಲಾವಿದನ ಕೈಚಳಕಕ್ಕೆ ವ್ಯಾಪಕ ಪ್ರಶಂಸೆ

error: Content is protected !!
Scroll to Top