ಮಹಿಳೆಯರೇ ಸವ್ಯಸಾಚಿಗಳು ➤ ಡಾ|| ಚೂಂತಾರು

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 10. ದಕ್ಷಿಣಕನ್ನಡ ಜಿಲ್ಲಾ ಗೃಹರಕ್ಷಕದಳ ಮತ್ತು ಪೌರರಕ್ಷಣಾ ಪಡೆಯ ವತಿಯಿಂದ ಹಾಗೂ ಮಾಂಡೊವಿ ಮೋಟರ್ಸ್ ಹಂಪನಕಟ್ಟೆ ಇವರ ಸಹಯೋಗದೊಂದಿಗೆ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮೂರು ಮಂದಿ ಮಹಿಳಾ ಗೃಹರಕ್ಷಕಿಯರಿಗೆ ಹಾಗೂ ಇಬ್ಬರು ಪೌರಕಾರ್ಮಿಕರಿಗೆ ಮಾಂಡೊವಿ ಮೋಟರ್ಸ್ ಹಂಪನಕಟ್ಟೆಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ದ.ಕ. ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಮಾತನಾಡಿ, ಮಹಿಳೆಯು ಒಬ್ಬ ತಾಯಿಯಾಗಿ, ಹೆಂಡತಿಯಾಗಿ, ತಂಗಿಯಾಗಿ, ಮಗಳಾಗಿ, ಸೊಸೆಯಾಗಿ ಪುರುಷರ ಜೀವನದಲ್ಲಿ ಬಹು ಮುಖ್ಯ ಭೂಮಿಕೆ ವಹಿಸುತ್ತಾಳೆ. ಈ ಸಮಾಜದಲ್ಲಿ ಪುರುಷರು ಮಹಿಳೆಯರು ಸಮಾನರು. ಮಹಿಳೆಯರು ಮನೆಯಲ್ಲೂ ಕೆಲಸ ಮಾಡಿ ಹೊರಗಡೆಯೂ ಕೆಲಸಗಳನ್ನು ಮಾಡುತ್ತಾರೆ. ಮಾನಸಿಕವಾಗಿ ಮಹಿಳೆ ಪುರುಷರಿಗಿಂತಲೂ ಬಲಶಾಲಿ, ಒತ್ತಡದ ಸನ್ನಿವೇಶವನ್ನು ನಿಭಾಯಿಸುವಲ್ಲಿ ಮಹಿಳೆ ಹೆಚ್ಚು ಯಶಸ್ವಿಯಾಗುತ್ತಾಳೆ ಎಂದು ನುಡಿದರು. ಇನ್ನೋರ್ವ ಮುಖ್ಯಅತಿಥಿಯಾಗಿ ಆಗಮಿಸಿದ ಮಂಗಳೂರು ನಗರದ ಚೀಫ್‍ ಟ್ರಾಫಿಕ್ ವಾರ್ಡನ್ ಶ್ರೀ ಸುರೇಶ್ ನಾಥ್ ಅವರು ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗೆ ಶುಭಾಶಯ ತಿಳಿಸಿದರು. ಮಹಿಳೆಯರಿಗೆ ಸಮಾಜದಲ್ಲಿ ಸಮಾನತೆ, ಸ್ವಾಸ್ಥ್ಯ, ಶಿಕ್ಷಣ, ಸ್ವಾವಲಂಬನೆ, ಸಮಾಜಿಕ ನ್ಯಾಯ, ಸಂವೇದನಾ ಶೀಲತೆ ಎಂಬ ಆರು ‘S’ ಸೂತ್ರಗಳ ಮಹತ್ವವನ್ನು ತಿಳಿಸಿ ಅದನ್ನು ಸಿಗುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ನುಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಾಂಡೊವಿ ಮೋಟರ್ಸ್ ನ ಡೆಪ್ಯೂಟಿ ಜನರಲ್ ಮ್ಯಾನೇಜರ್ ಶ್ರೀ ಶಶಿಧರ ಟಿ. ಕಾರಂತ ಅವರು ಮಾತನಾಡಿ, ಮಹಿಳಾ ದಿನವನ್ನು ಯಾಕಾಗಿ ಆಚರಿಸುತ್ತಾರೆ ಹಾಗೂ ಆಚರಿಸುವ ಉದ್ದೇಶವನ್ನು ಎಲ್ಲಾ ಮಹಿಳೆಯರಿಗೂ ತಿಳಿಸಿದರು. ಇನ್ನೋರ್ವ ಅಧ್ಯಕ್ಷತೆಯನ್ನು ವಹಿಸಿದ ಮಾಂಡೊವಿ ಮೋಟರ್ಸ್ ನ  ಅಸೋಸಿಯೇಟ್ ವೈಸ್ ಪ್ರೆಸಿಡೆಂಟ್ ಶ್ರೀ ನೆರೆಂಕಿ ಪಾರ್ಶ್ವ ನಾಥ್ ಅವರು ಮಹಿಳೆಯರಿಗೆ ಶುಭಾಶಯ ತಿಳಿಸಿ ಮಾತನಾಡಿ, ಎಲ್ಲಿ ಹೆಣ್ಣು ಪೂಜಿಸಲ್ಪಡುತ್ತಾಳೋ, ಗೌರವಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ವಾಸಿಸುತ್ತಾರೆ, ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರೇ ಹೆಚ್ಚಿನ ಕೆಲಸಗಳನ್ನು ಮಾಡುತ್ತಾರೆ ಎಂದು ನುಡಿದರು.

Also Read  3 ವರ್ಷದ ಬಳಿಕ ವಿದೇಶದಿಂದ ಬಂದು ಅಮ್ಮನಿಗೆ ಸರ್ಪ್ರೈಸ್ ಕೊಟ್ಟ ಮಗ..! - ಹೃದಯಸ್ಪರ್ಶಿ ವಿಡಿಯೋ ವೈರಲ್

ಈ ಸಂದರ್ಭದಲ್ಲಿ ದಕ್ಷಿಣಕನ್ನಡ ಜಿಲ್ಲಾ ಗೃಹರಕ್ಷಕದಳದ ಮಂಗಳೂರು ಘಟಕದ ಗೃಹರಕ್ಷಕಿಯರಾದ ಶುಭ ಮೆ.ನಂ 86, ಜಯಲಕ್ಷ್ಮಿ ಮೆ.ನಂ 95, ನತಾಲಿಯ ಮೆ.ನಂ 170 ಹಾಗೂ ಪೌರಕಾರ್ಮಿಕರಾದ ಸುಮಾ, ರತ್ನಾ ಇವರುಗಳಿಗೆ ಶಾಲು ಹೊದಿಸಿ, ಹಾರ ಹಾಕಿ ಫಲಪುಷ್ಪ ನೀಡಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದ ನಿರೂಪಣೆಯನ್ನು ಮಾಂಡೊವಿ ಮೋಟರ್ಸ್ ನ ಸೇಲ್ಸ್ಎಕ್ಸಿಕ್ಯೂಟಿವ್ ಶ್ರೀ ಮುರಳೀಧರ್ ಅವರು ನಿರ್ವಹಿಸಿದರು. ಶ್ರೀ ಮಾಧವ್ ಉಳ್ಳಾಲ್ ಮತ್ತು ಶ್ರೀಮತಿ ಅನುಪಮಾ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕಛೇರಿಯ ಅಧೀಕ್ಷಕಿಯಾದ ಶ್ರೀಮತಿ ಕವಿತಾ ಕೆ.ಸಿ., ಪ್ರಥಮ ದರ್ಜೆ ಸಹಾಯಕಿಯಾದ ಶ್ರೀಮತಿ ಅನಿತಾ ಟಿ.ಎಸ್., ಗೃಹರಕ್ಷಕಿಯರಾದ ಮರಿಯಾ ಮೋಲಿ, ಚಂಪಾ, ಸೆಲೆಸ್ಟಿನ್ ಹಾಗೂ ಮಾಂಡೊವಿ ಮೋಟರ್ಸ್ ನ ಸುಮಾರು 100 ಮಂದಿ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Also Read  ಗೃಹಲಕ್ಷ್ಮೀ ಯೋಜನೆಗೆ SMS ಅಗತ್ಯವಿಲ್ಲ- ನೇರ ನೋಂದಣಿ

error: Content is protected !!
Scroll to Top