ವೃತ್ತಿ ಮಾರ್ಗದರ್ಶನ ಅಗತ್ಯ ➤ ಜಿಲ್ಲಾ ಕೌಶಲ್ಯಾಭಿವೃಧ್ಧಿ ಅಧಿಕಾರಿ ಹೇಮಚಂದ್ರ ಅಭಿಪ್ರಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 10. ಪ್ರಸ್ತುತ ಬದಲಾಗುತ್ತಿರುವ ಔದ್ಯೋಗಿಕ ಪರಿಸರದಲ್ಲಿ ವೃತ್ತಿ ಮಾರ್ಗದರ್ಶನ ಹಾಗೂ ಉನ್ನತ ಉದ್ಯೋಗಕ್ಕೆ ಅಗತ್ಯವಿರುವ ಕೌಶಲ್ಯಗಳನ್ನು ಅಭಿವೃಧ್ದಿ ಪಡಿಸುವ ಅಗತ್ಯವಿದೆ ಎಂದು ಜಿಲ್ಲಾ ಕೌಶಲ್ಯಾಭಿವೃಧ್ಧಿ ಅಧಿಕಾರಿ ಹೇಮಚಂದ್ರ ಅಭಿಪ್ರಾಯಪಟ್ಟರು. ಅವರು ಯು.ಎನ್.ಡಿ.ಪಿ-ಪ್ರಾಜೆಕ್ಟ್ ಕೋಡ್ ಉನ್ನತಿ, ಎಸ್.ಎ.ಪಿ ಮತ್ತು ಜಿಲ್ಲಾ ಕೌಶಲಾಭಿವೃಧ್ಧಿ ಇಲಾಖೆ ಹಾಗೂ ಹೆಡ್ ಹೆಲ್ಡ್ ಹೈ ಸಂಸ್ಥೆಯ ಸಹಕಾರದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕಾಲೇಜುಗಳ ಎನ್.ಎಸ್.ಎಸ್ ಮತ್ತು ಪ್ಲೇಸ್ಮೆಂಟ್ ಅಧಿಕಾರಿಗಳಿಗೆ ನಗರದ ಖಾಸಗಿ ಹೋಟೆಲ್‍ನಲ್ಲಿ ಹಮ್ಮಿಕೊಂಡಿದ್ದ ಎರಡು ದಿನದ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.


ವಿದ್ಯಾರ್ಥಿಗಳ ಮತ್ತು ಶಿಕ್ಷರರ ಸಬಲೀಕರಣ ಮಾಡುವ ಯೋಜನೆಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ ಎಂದ ಅವರು, ಪ್ರಸ್ತುತ ಕೈಗಾರಿಕೆಗಳ ಅಗತ್ಯತೆಗಳಿಗೆ ತಕ್ಕಂತೆ ಕೌಶಲ್ಯಗಳು ಮತ್ತು 21ನೇ ಶತಮಾನದ ಕೌಶಲ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕಿದೆ, ಈ ಕೌಶಲ್ಯಗಳು ಪಠ್ಯೇತರ ಚಟುವಟಿಕೆಗಳಾಗಿದ್ದು, ಪ್ರಾಜೆಕ್ಟ್ ಕೋಡ್ ಉನ್ನತಿ ಮೂಲಕ ಯುಎನ್‍ಡಿಪಿ ವಿದ್ಯಾರ್ಥಿಗಳಿಗೆ ನೀಡುತ್ತಿದೆ ಎಂದರು. ಮಂಗಳೂರು ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್. ಸಂಯೋಜಕ ಡಾ.ನಾಗರತ್ನ ಕೆ.ವಿ ಶುಭಕೋರಿದರು.  ವಿವಿಧ ಚಟುವಟಿಕೆ ಆಧಾರಿತ ಕಲಿಕಾ ಕಾರ್ಯಗಾರದಲ್ಲಿ ಯುವಜನತೆಯ ಸವಾಲುಗಳನ್ನು ಅರಿಯುವ ಮೂಲಕ ವೃತ್ತಿ ಮಾರ್ಗದರ್ಶನ ಸಮಾಲೋಚನೆಯನ್ನು ಹೇಗೆ ಪರಿಣಾಮಕಾರಿಯಾಗಿ ಮಾಡಬಹುದು, 21ನೇ ಶತಮಾನದ ಕೌಶಲ್ಯಗಳ ಪ್ರಾಮುಖ್ಯತೆ ಮತ್ತು ಅವಶ್ಯಕತೆಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು ಎಂಬುದರ ಬಗ್ಗೆ ಚರ್ಚಿಸಲಾಗುವುದು ಎಂದು ಕಾರ್ಯಗಾರದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ರಮ್ಯ ತಿಳಿಸಿದರು. ಯುಎನ್‍ಡಿಪಿ-ಪ್ರಾಜೆಕ್ಟ್ ಕೋಡ್ ಉನ್ನತಿ, ಜಿಲ್ಲಾ ಸಂಯೋಜಕ ಶಿವಕುಮಾರ ಕೆ.ಎಂ, ಸಿಬ್ಬಂದಿಗಳಾದ ಲಿಡಿಯಾ, ದೀಕ್ಷ, ಕೀರ್ತನ್, ಹೆಡ್ ಹೆಲ್ಡ್ ಹೈ ಸಂಸ್ಥೆಯ ಶ್ರೀಕಾಂತ್, ಸುರಕ್ಷಾ ಭಾಗವಹಿಸಿದ್ದರು. ಹೆಡ್ ಹೆಲ್ಡ್ ಹೈ ಸಂಸ್ಥೆಯ ರಾಘವೇಂದ್ರ ಸ್ವಾಗತಿಸಿದರು.

Also Read  ಬೆಂಗಳೂರಿನ ಉದ್ಯಮಿ ಮೈಸೂರಲ್ಲಿ ಆತ್ಮಹತ್ಯೆ ➤ ಜೊತೆಗಿದ್ದ ಪತ್ನಿ ನಾಪತ್ತೆ...!

error: Content is protected !!
Scroll to Top