ದ್ವಿತೀಯ ಪಿಯುಸಿ ಪರೀಕ್ಷೆಗೆ ಮೊದಲ ದಿನ ಶೇ.95.5 ರಷ್ಟು ವಿದ್ಯಾರ್ಥಿಗಳು ಹಾಜರು ➤ ಇಬ್ಬರು ಡಿಬಾರ್

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.10. ವಿದ್ಯಾರ್ಥಿಗಳ ಭವಿಷ್ಯದ ಪ್ರಮುಖ ಘಟ್ಟ ಎಂದೇ ಹೇಳಲಾಗುವ ದ್ವಿತೀಯ ಪಿಯುಸಿ ಪರೀಕ್ಷೆ ರಾಜ್ಯದಾದ್ಯಂತ ಗುರುವಾರದಿಂದ ಆರಂಭವಾಗಿದ್ದು, ಮೊದಲ ದಿನವೇ ಶೇ.95.5 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.

ಪರೀಕ್ಷೆಯ ಮೊದಲ ದಿನವಾದ ನಿನ್ನೆ ಕನ್ನಡ ಮತ್ತು ಅರೇಬಿಕ್ ಭಾಷಾ ಪರೀಕ್ಷೆಗಳು ನಡೆದವು. 5.33 ಲಕ್ಷ ವಿದ್ಯಾರ್ಥಿಗಳ ಪೈತಿ 5.1 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದಾರೆ, ಒಟ್ಟು 23,771 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.’

ಮೊದಲ ದಿನವೇ ಇಬ್ಬರು ವಿದ್ಯಾರ್ಥಿಗಳು ಡಿಬಾರ್ ಆಗಿದ್ದು ಎರಡು ಅವ್ಯವಹಾರ ಪ್ರಕರಣಗಳು ವರದಿಯಾಗಿವೆ. ಬೆಳಗಾವಿ ಹಾಗೂ ಯಾದಗಿರಿಯಲ್ಲಿ ವಿದ್ಯಾರ್ಥಿಗಳು ಡಿಬಾರ್ ಆಗಿದ್ದಾರೆಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

Also Read  'ಸಿದ್ದರಾಮಯ್ಯ ಅವರಿಗೆ ಭಯ ಹುಟ್ಟಿಕೊಂಡಿದೆ' ➤ ಸಿಎಂ ಬೊಮ್ಮಾಯಿ

 

error: Content is protected !!
Scroll to Top