ಸುಳ್ಯ:ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಅರಂತೋಡು, ಮಾ. 10. ತೋಟದ ಮರವೊಂದರಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾದ ಘಟನೆ ಆರಂತೋಡಿನಲ್ಲಿ ನಡೆದಿದೆ.

ಮೃತಪಟ್ಟವರನ್ನು ಅರಂತೋಡು ಗ್ರಾಮದ ಕಲ್ಲುಗುಡ್ಡೆ ಮನೆ ಪದ್ಮಯ್ಯ ಕೆ. (47) ಎಂದು ಗುರುತಿಸಲಾಗಿದೆ. ಇವರು ತೋಟದಲ್ಲಿ ಪೈಪಿನ ಜೆಟ್‌ ಬದಲಿಸಿ ಬರುತ್ತೇನೆ ಎಂದು ಹೇಳಿ ಹೋದವರು ವಾಪಾಸು ಮನೆಗೆ ಹಿಂದಿರುಗದೇ ಇದ್ದು, ಮನೆಯವರು ಹುಡುಕಾಟ ನಡೆಸಿದಾಗ ಮಧ್ಯಾಹ್ನದ ವೇಳೆಗೆ ಪದ್ಮಯ್ಯ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ. ಸ್ಥಳಕ್ಕೆ ಸುಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Also Read  ಮೈಸೂರಿನ ಎಲ್ಲಾ ಪ್ರವಾಸಿ ತಾಣಗಳು ಸಾರ್ವಜನಿಕ ಮುಕ್ತ ➤ ಜಿಲ್ಲಾಧಿಕಾರಿ ಹಾಕಿದ್ದ ನಿರ್ಬಂಧ ತೆರವು

error: Content is protected !!
Scroll to Top