ಮರ್ಧಾಳ: ನೂತನ ವಿದ್ಯುತ್ ಪರಿವರ್ತಕ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಮರ್ಧಾಳ, ಮಾ. 10. ಇಲ್ಲಿನ ಬೆಥನಿ ಜೀವನ್ ಜ್ಯೋತಿ ಶಾಲೆಯ ಬಳಿ ಹೊಸದಾಗಿ ನಿರ್ಮಿಸಲಾಗಿರುವ ವಿದ್ಯುತ್ ಪರಿವರ್ತಕವನ್ನು ಮೆಸ್ಕಾಂ ಕಡಬ ಶಾಖಾ ಪವರ್‌ಮ್ಯಾನ್ ಉದಯಕುಮಾರ್‌ರವರು ತೆಂಗಿನ ಕಾಯಿ ಒಡೆಯುವ ಮೂಲಕ ಉದ್ಘಾಟಿಸಿದರು.

ಇಲ್ಲಿನ ವಿದ್ಯುತ್ ಸಮಸ್ಯೆಯನ್ನು ಮನಗಂಡು ಕಡಬ ಮೆಸ್ಕಾಂ ಎಇಇ ಸಜಿಕುಮಾರ್ ಹಾಗೂ ಎಇ ಸತ್ಯನಾರಾಯಣರವರು ಇಲ್ಲಿಗೆ ನೂತನ ಟಿಸಿಯನ್ನು ಮಂಜೂರು ಮಾಡಿದ್ದರು. ಇದರ ಕಾಮಗಾರಿಯನ್ನು ಗುತ್ತಿಗೆದಾರ ಕೃಷ್ಣ ಇಲೆಕ್ಟ್ರಿಕಲ್ಸ್‌ನ ಅಭಿಲಾಷ್‌ರವರು ಮಾಡಿದರು. ಈ ಸಂದರ್ಭ ಮೆಸ್ಕಾಂನ ಪವರ್‌ಮ್ಯಾನ್ ಯಲ್ಲಪ್ಪ, ಗ್ರಾ.ಪಂ. ಅಧ್ಯಕ್ಷ ಹರೀಶ್ ಕೋಡಂದೂರು, ತಾ.ಪಂ.ಮಾಜಿ ಸದಸ್ಯ ಗಣೇಶ್ ಕೈಕುರೆ, ಶಿವಪ್ರಸಾದ್ ಕೈಕುರೆ, ಜೀವನ್ ಜ್ಯೋತಿ ಶಾಲೆಯ ಮುಖ್ಯಗುರು ಶೈಲಾ, ಎಪಿಎಂಸಿ ಮಾಜಿ ಸದಸ್ಯ ಮೇದಪ್ಪ ಗೌಡ, ಕೃಷಿಕರಾದ ಟೋಮಿ, ಪ್ರಶಾಂತ್ ರೈ, ವಿನಾಯಕ ಸ್ಟುಡಿಯೋ ಮಾಲಕ ಬಾಲಕೃಷ್ಣ, ಶರತ್ ಕೊಡೆಂಕೆರಿ, ಗಂಗಾಧರ ರೈ, ಮಹಮ್ಮದ್ ಪಿಲಿಮಜಲು, ಪ್ರತೀಶ್ ಮೊದಲಾದವರು ಉಪಸ್ಥಿತರಿದ್ದರು.

Also Read  ಅರಣ್ಯದಿಂದ ಮರ ಸಾಗಾಟ- ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಮಿಂಚಿನ ಕಾರ್ಯಾಚರಣೆ

error: Content is protected !!
Scroll to Top