ರೆಂಜಿಲಾಡಿ ಆನೆ ದಾಳಿ ವಿಚಾರದಲ್ಲಿ ಕುಟ್ರುಪಾಡಿ ಪಂಚಾಯತ್ ಆಡಳಿತ ಮಂಡಳಿಯ ವಿರುದ್ದ ಹೇಳಿಕೆ – ಆರೋಪ       ➤ ಐತ್ತೂರು ಗ್ರಾ.ಪಂ‌.ಅಭಿವೃದ್ಧಿ ಅಧಿಕಾರಿ ಸುಜಾತ  ವಿರುದ್ದ ಖಂಡನಾ ನಿರ್ಣಯ   

(ನ್ಯೂಸ್ ಕಡಬ)newskadaba.com  ಕಡಬ, ಮಾ.10. ಕುಟ್ರುಪಾಡಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನ್ ಗೌಡ ಕೆರೆಕೋಡಿ ಇವರ ಅಧ್ಯಕ್ಷತೆಯಲ್ಲಿ  ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು.

ಸಭೆಯ ಪ್ರಾರಂಭದಲ್ಲಿ ಸದಸ್ಯರು  ಮಾತನಾಡಿ ಐತ್ತೂರು ಗ್ರಾಮ ಪಂಚಾಯತ್ ಪಿ.ಡಿ.ಒ ಸುಜಾತರವರು  ಇತ್ತೀಚೆಗೆ ರೆಂಜಿಲಾಡಿ ಗ್ರಾಮದಲ್ಲಿ ನಡೆದ ಆನೆ ದಾಳಿ ಸಂದರ್ಭದಲ್ಲಿ ಕುಟ್ರುಪಾಡಿ ಪಂಚಾಯತಿಯ ಅಧ್ಯಕ್ಷರು, ಪಿ ಡಿ. ಒ, ಸದಸ್ಯರು ಯಾರು ಕೂಡ ಆಗಮಿಸಿರುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಪಿಡಿಒರವರು ಬಾಲಿಶವಾಗಿ  ಮಾಧ್ಯಮಕ್ಕೆ ಪಂಚಾಯತ್ ವಿರುದ್ದ ಹೇಳಿಕೆಯನ್ನು ನೀಡಿರುತ್ತಾರೆ. ಈ ಬಗ್ಗೆ ಖಂಡನಾ ನಿರ್ಣಯವನ್ನು  ಮೇಲಾಧಿಕಾರಿಗಳಿಗೆ ಬರೆದುಕೊಳ್ಳುವುದೆಂದು ನಿರ್ಣಯಿಸಲಾಯಿತು. ನೂತನವಾಗಿ ಆಯ್ಕೆಯಾದ ಸದಸ್ಯರಾದ ಸುದೇಶ್ ಬಿ ಇವರಿಗೆ ಅಭಿನಂದನೆ ಸಲ್ಲಿಸಲಾಯಿತು.

Also Read  ➤ ಲೋಕಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ!

ಇತ್ತೀಚೆಗೆ ಪದೋನ್ನತಿ ಹೊಂದಿರುವ ಗ್ರಾಮ ಪಂಚಾಯತಿ ಸಿಬ್ಬಂದಿ ಅಂಗು ರವರ ಮುಂದಿನ ವೃತ್ತಿ ಜೀವನಕ್ಕೆ ಶುಭ ಹಾರೈಸಲಾಯಿತು. ಆರೋಗ್ಯ ಅಮೃತ ಅಭಿಯಾನ ಕುರಿತು ಇದರ ತಾಲೂಕು ಸಂಯೋಜಕಿ ಮತ್ತು ಸಂಪನ್ಮೂಲ ವ್ಯಕ್ತಿ ಸದಸ್ಯರಿಗೆ ಮಾಹಿತಿ ನೀಡಿದರು. ತದನಂತರ ವಿವಿಧ ಗ್ರಾಮಾಭಿವೃದ್ದಿ  ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಸದಸ್ಯರು, ಕಾರ್ಯದರ್ಶಿ, ಉಪಸ್ಥಿತರಿದ್ದರು ಪಿ.ಡಿ.ಓ ಆನಂದ ಎ ಸ್ವಾಗತಿಸಿ  ವಂದಿಸಿದರು ಎಂದು ವರದಿ ತಿಳಿಸಿದೆ.

 

 

error: Content is protected !!
Scroll to Top