ನೀವು ಅರ್ಧ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಲಾಯಿಸುತ್ತೀರಾ…? ► ಹಾಗಾದರೆ ನಿಮಗೆ ಕಾದಿದೆ ಬಿಗ್ ಶಾಕ್…!!

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.02. ನೀವು ದ್ವಿಚಕ್ರ ವಾಹನ ಸವಾರಿ ಮಾಡುವ ಸಂದರ್ಭದಲ್ಲಿ ಅರ್ಧ ತೆರೆದಿರುವ ಹೆಲ್ಮೆಟ್ ಧರಿಸುತ್ತೀರಾ…? ಹಾಗಿದ್ದರೆ ನಿಮಗೆ‌ ಕಾದಿದೆ ಶಾಕ್… ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅರ್ಧ ಹೆಲ್ಮೆಟ್ ಧರಿಸಿ ಬಂದ ವಾಹನ ಸವಾರರಿಗೆ ಪೊಲೀಸರು ಕಾರ್ಯಚರಣೆ ನಡೆಸಿ ಶಾಕ್ ನೀಡಿದ್ದಾರೆ.

ಮೈಸೂರು ಪೋಲಿಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್ ರವರ ಸೂಚನೆಯ ಮೇರೆಗೆ ನಗರದ ಎಲ್ಲಾ ಠಾಣೆಗಳ ವ್ಯಾಪ್ತಿಯ ಪೊಲೀಸರು ರಸ್ತೆಗಿಳಿದು ಅರ್ಧ ಹೆಲ್ಮೇಟ್ ಧರಿಸಿ ಬಂದ ವಾಹನ ಸವಾರರನ್ನು ತಡೆದು ನಿಷೇಧಿತ, ದೋಷ ಪೂರಿತ ಹೆಲ್ಮೆಟ್ ಗಳನ್ನು ವಶಕ್ಕೆ ಪಡೆದಿದ್ದಾರೆ. ವಾಹನ ಸವಾರರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಚರಣೆ ನಡೆಸಿ ಹೆಲ್ಮೆಟ್ ಗಳನ್ನು ರಸ್ತೆ ಬದಿ ರಾಶಿ ಹಾಕಿದ್ದಾರೆ.

Also Read  ಯಾದಗಿರಿಯಲ್ಲಿ ಕೋವಿಡ್ ಸ್ಪೋಟ ➤ ಬರೋಬ್ಬರಿ 60 ಜನರಿಗೆ ಸೋಂಕು ದೃಢ

ಅಲ್ಲದೆ ಅರ್ಧ ಹೆಲ್ಮೆಟ್ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೂ ದಾಳಿ ನಡೆಸಿರುವ ಪೊಲೀಸರು ಇನ್ಮುಂದೆ ಅರ್ಧ ಹೆಲ್ಮೆಟ್ ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಪ್ರಾಥಮಿಕ ಹಂತದಲ್ಲಿ ಮೈಸೂರಿನಲ್ಲಿ ಇಂತಹ ಕಾರ್ಯಾಚರಣೆ ನಡೆದಿದ್ದರೂ, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಇಂತಹ ಕಾರ್ಯಾಚರಣೆ ಮುಂದುವರಿಯುವ ಲಕ್ಷಣಗಳು ಗೋಚರಿಸುತ್ತಿವೆ. ಒಟ್ಟಿನಲ್ಲಿ ಅರ್ಧ ಹೆಲ್ಮೆಟ್ ಧರಿಸುವ ದ್ವಿಚಕ್ರ ವಾಹನ ಸವಾರರು ಎಚ್ಚರಿಕೆ ವಹಿಸಬೇಕಾಗಿರುವುದಂತೂ ಸುಳ್ಳಲ್ಲ.

error: Content is protected !!
Scroll to Top