ಸುಳ್ಯ: ರಸ್ತೆಯ ವಿಚಾರದಲ್ಲಿ ವಿವಾದ- ಪೊಲೀಸ್ ಎಂಟ್ರಿ ➤ ತನಿಖೆಯ ವೇಳೆ ಸಾಗುವಾನಿ ಮರದ ದಿಮ್ಮಿ ಪತ್ತೆ

(ನ್ಯೂಸ್ ಕಡಬ) newskadaba.com ಸುಳ್ಯ, ಮಾ. 10. ರಸ್ತೆ ವಿವಾದಕ್ಕೆ ಸಂಬಂಧಿಸಿ ಸ್ಥಳ ಪರಿಶೀಲನೆಗೆಂದು ಬಂದ ಪೊಲೀಸರಿಗೆ ಮನೆಯ ಆವರಣದಲ್ಲಿ ಸಾಗುವಾನಿ ಮರದ ದಿಮ್ಮಿ ಹಾಗೂ ಬೀಟಿ ಮರದ ದಿಮ್ಮಿ ಗಮನಕ್ಕೆ ಬಂದಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ ಘಟನೆ ನಡೆದಿದೆ.


ಮೊಯಿದಿನ್ ಎಂಬವರ ಮನೆಯ ಜಾಗದ ಬಳಿಯಿರುವ ದೇವಸ್ಥಾನಕ್ಕೆ ಸಂಬಂಧಿಸಿದ ಮಾರಿಕಳ ಕಾರ್ಯಕ್ರಮ ನಡೆಸುವ ಸ್ಥಳಕ್ಕೆ ತೆರಳುವ ರಸ್ತೆಯನ್ನು ಮೊಯಿದಿನ್ ರವರು ಬೇಲಿ ಹಾಕಿ ಬಂದ್ ಮಾಡಿದ್ದರು. ಈ ವಿಷಯಕ್ಕೆ ಸಂಬಂಧಿಸಿ ಸ್ಥಳೀಯ ದೇವಸ್ಥಾನದ ಮುಖಂಡರು ಹಾಗೂ ಮೊಯ್ದೀನ್ ರವರ ನಡುವೆ ವಿವಾದ ಉಂಟಾಗಿ ಸಂಪಾಜೆ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಾಗಿತ್ತು. ಘಟನಾ ಸ್ಥಳಕ್ಕೆ ತನಿಖೆಗೆಂದು ಸಂಪಾಜೆ ಠಾಣಾ ಪೊಲೀಸರು ಬಂದಿದ್ದು, ಈ ಸಂದರ್ಭ ಸ್ಥಳ ಪರಿಶೀಲನೆ ನಡೆಸುತ್ತಿದ್ದಾಗ ಮೊಯಿದೀನ್ ರವರ ಜಾಗದಲ್ಲಿ ಸಾಗುವಾನಿ ಮರದ ದಿಮ್ಮಿ ಹಾಗೂ ಬೀಟಿ ಮರದ ದಿಮ್ಮಿ ಶೇಖರಣೆ ಮಾಡಿಟ್ಟಿರುವ ಘಟನೆಯ ಬೆಳಕಿಗೆ ಬಂದಿದೆ. ಪೊಲೀಸರು ಮರಗಳನ್ನು ಪರಿಶೀಲನೆ ಮಾಡಿ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಘಟನೆಯ ಕುರಿತು ವಿಚಾರ ಹರಡುತ್ತಿದ್ದಂತೆಯೇ ಪೆರಾಜೆ ಸಮೀಪದ ನೂರಕ್ಕೂ ಹೆಚ್ಚು ಸ್ಥಳೀಯರು ಘಟನಾ ಸ್ಥಳದಲ್ಲಿ ಜಮಾಯಿಸಿ ಮೋಯ್ದಿನ್ ರವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಂಪಾಜೆ ಪೊಲೀಸ್ ಠಾಣಾ ಎ ಎಸ್ ಐ ಶ್ರೀನಿವಾಸ್, ಸಿಬ್ಬಂದಿಗಳಾದ ಕರಬಸಪ್ಪ ಚಕ್ರ ಸಾಲಿ, ಜಯಣ್ಣ ಹಾಗೂ ಅರಣ್ಯ ಇಲಾಖೆಯ ವಿಜಯೇಂದ್ರ ಡಿ ಆರ್ ಎಫ್ ಓ, ಗಸ್ತು ಅರಣ್ಯ ವೀಕ್ಷಕ ನಾಗರಾಜ್, ಪುರುಷೋತ್ತಮ್, ಅರಣ್ಯ ವೀಕ್ಷಕರಾದ ಚಿನ್ನಪ್ಪ, ವಸಂತ, ವಾಹನ ಚಾಲಕರಾದ ಭರತ್ ಮೊದಲಾದವರು ಭಾಗಿಯಾಗಿದ್ದರು.

Also Read  ಮದುವೆಗೆ ಒಪ್ಪದ ಮಗಳನ್ನೇ 1ಲಕ್ಷ ರೂ.ಗೆ ಮಾರಿದ ಪೋಷಕರು..!

error: Content is protected !!
Scroll to Top