ಮಂಗಳೂರು: ವಿವಿಧ ಪ್ರಕರಣಗಳ ಆರೋಪಿ ಕ್ಯಾಲಿಕಟ್ ಏರ್ ಪೋರ್ಟ್ ನಲ್ಲಿ ಅರೆಸ್ಟ್

crime, arrest, suspected

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 10. ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯನ್ನು ಕ್ಯಾಲಿಕಟ್ ವಿಮಾನ ನಿಲ್ದಾಣದಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ ಘಡನೆ ನಡೆದಿದೆ.

ಬಂಧಿತನನ್ನು ಕಣ್ಣೂರು ಜಿಲ್ಲೆಯ ಮಹಮ್ಮದ್‌ ಅಸ್ಗರ್‌ ಕರಿಂಕಲ್ಲನ್‌ (26) ಎಂದು ಗುರುತಿಸಲಾಗಿದೆ. ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಈತನನ್ನು ಮಾದಕ ವಸ್ತು ಸಾಗಾಟ, ಮಾರಾಟ ಹಾಗೂ ಸೇವಿಸಿರುವ ಶಂಕೆಯ ಹಿನ್ನೆಲೆ ತನಿಖೆ ನಡೆಸಿದಾಗ ಮಂಗಳೂರು ನಗರ ಸೆಂಟ್ರಲ್ ರೈಲ್ವೇ ನಿಲ್ದಾಣ ಬಳಿಯಲ್ಲಿ ಮಾರ್ಚ್ 6ರಂದು ಗಾಂಜಾ ಖರೀದಿಸಿ ಸೇವಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ತ ಮಾದಕ ದ್ರವ್ಯ ಸೇವನೆ ಮಾಡಿರುವುದು ದೃಢಪಟ್ಟಿದೆ. ಪೊಲೀಸ್ ಇನ್ಸ್ ಪೆಕ್ಟರ್ ಶ್ಯಾಮಸುಂದರ್ ಎಚ್. ಎಂ. ಮತ್ತು ತಂಡವು ಕ್ಯಾಲಿಕಟ್ ವಿಮಾನ ನಿಲ್ದಾಣದಿಂದ ಅಸ್ಗರ್‌ನನ್ನು ಬಂಧಿಸಿ ಮಂಗಳೂರಿಗೆ ಕರೆ ತಂದಿದ್ದಾರೆ.

Also Read  ಗುಂಡು ಹಾರಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡ ಕರ್ನಾಟಕದ ಯೋಧ ➤ ಐವರು ಮೃತ್ಯು

error: Content is protected !!
Scroll to Top