ನವವಧುವನ್ನು ಟ್ರಾಫಿಕ್ ನಲ್ಲೇ ಬಿಟ್ಟು ವರ ಪರಾರಿ..!   

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 09. ವಧುವನ್ನು ಭಾರೀ ಟ್ರಾಫಿಕ್‌ ಮಧ್ಯೆ ಬಿಟ್ಟು ವರ ಪರಾರಿಯಾದ ಘಟನೆ ಮಹದೇವಪುರ ಟೆಕ್‌ ಕಾರಿಡಾರ್‌ ಸಮೀಪ ನಡೆದಿದೆ.

ಚಿಕ್ಕಬಳ್ಳಾಪುರ ಮೂಲದ ಜಾರ್ಜ್ ಎಂಬಾತ ವಿವಾಹವಾದ ಮರು ದಿನವೇ ಕಾರಿನಲ್ಲಿ ಪತ್ನಿ ಜೊತೆ ಚರ್ಚ್‌ಗೆ ತೆರಳುತ್ತಿದ್ದ. ದಂಪತಿಗಳಿಬ್ಬರು ಟ್ರಾಫಿಕ್‌ ಮಧ್ಯೆ ಇರುವಾಗ ವರ ವಧುವನ್ನು ಟ್ರಾಫಿಕ್ ನಲ್ಲಿ ಬಿಟ್ಟು ಪರಾರಿಯಾಗಿದ್ದ. ಕಾರಿನಲ್ಲಿ ಹೋಗುತ್ತಿದ್ದಂತೆ ವರನ ಮೊಬೈಲ್‌ಗೆ ಅನೈತಿಕ ಸಂಬಂಧ ಹೊಂದಿದ ಯುವತಿಯ ಮೆಸೆಜ್‌ ಬಂದಿದ್ದು, ಆಕೆ ಸಂದೇಶದಲ್ಲಿ ಪೋಟೋವನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆ ಹಾಕಿದ್ದಳು ಎನ್ನಲಾಗಿದೆ. ಇದರಿಂದ ಪತ್ನಿಯನ್ನು ಟ್ರಾಫಿಕ್ ನಲ್ಲೇ ಬಿಟ್ಟು ವರ ಪರಾರಿಯಾಗಿದ್ದಾನೆ ಎನ್ನಲಾಗಿದೆ.

Also Read  ಬೆಂಗಳೂರು: ಅಮೆರಿಕ ಕಾನ್ಸುಲೆಟ್ ಕಚೇರಿ ಸ್ಥಾಪನೆಯಿಂದ ಉದ್ಯಮಿಗಳಿಗೆ ಅನುಕೂಲ; ಡಿಕೆ ಶಿವಕುಮಾರ್

 

error: Content is protected !!
Scroll to Top