ಬೆಳ್ಳಾರೆ: ದ.ಕ.ಜಿಲ್ಲಾ ಮಟ್ಟದ ಗಿರಿಜನ ಉತ್ಸವ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜ.02. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಡೆಸಲ್ಪಡುವ ಜಿಲ್ಲಾ ಮಟ್ಟದ ಗಿರಿಜನ ಉತ್ಸವವು ಬೆಳ್ಳಾರೆ ಸರಕಾರಿ ಪದವಿ ಪೂರ್ವ ಕಾಲೇಜಿನ ನಾರಾಯಣ ಶೇಖ ಸಭಾಂಗಣದಲ್ಲಿ ಜನವರಿ 2 ಮಂಗಳವಾರದಂದು ನಡೆಯಿತು.

ಜಿಲ್ಲಾ ಪಂಚಾಯತ್ ಸದಸ್ಯ ರಾದ ಎಸ್.ಎನ್. ಮನ್ಮಥ ಗಿರಿಜನ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಬೆಳ್ಳಾರೆ ಜೇಸಿಐ ಅಧ್ಯಕ್ಷ ಜಯರಾಮ ಉಮಿಕ್ಕಳ ಭಾಗವಹಿಸಿ ಶುಭ ಹಾರಿಸಿದರು. ಬೆಳ್ಳಾರೆ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಯು. ಸುಬ್ರಾಯ ಗೌಡ, ಎಸ್.ಡಿ.ಎಂ.ಸಿ ಸದಸ್ಯ ಉದಯಚಂದ್ರ ಕುರಿಯಾಜೆ, ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲೆ ಉಮಾ ಕುಮಾರಿ, ಹಿರಿಯ ಪ್ರಾಧ್ಯಾಪಕರಾದ ವಿಶ್ವನಾಥ್, ಉಪನ್ಯಾಸಕರಾದ ರಾಮಚಂದ್ರ ಭಟ್ ಮೊದಲಾದವರು ಉಪಸ್ಥಿತರಿದ್ದರು.

Also Read  ಕಡಬ ಜೇಸಿಐ ವತಿಯಿಂದ ವೃದ್ದಾಶ್ರಮಕ್ಕೆ ದೇಣಿಗೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲೆಯ ಸಹಾಯಕ ನಿರ್ದೇಶಕ ರಾದ ಚಂದ್ರಹಾಸ ರೈ ಬಿ. ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿ ಸ್ವಾಗತಿಸಿದರು. ಉಮೇಶ್ ಕೆ.ಆರ್. ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರಸಿದ್ಧ 19 ತಂಡಗಳ ಕಲಾವಿದರಿಂದ ಅತ್ಯಾಕರ್ಷಕ ರೀತಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

error: Content is protected !!
Scroll to Top