ಉಳ್ಳಾಲ: ಸೊಪ್ಪು ತಿಂದು ನಾಲ್ಕು ಜಾನುವಾರು ಅಸ್ವಸ್ತ- ಒಂದು ಮೃತ್ಯು

(ನ್ಯೂಸ್ ಕಡಬ) newskadaba.com ಉಳ್ಳಾಲ, ಮಾ. 09. ಸೊಪ್ಪು ತಿಂದ ಎರಡು ಹಸು ಹಾಗೂ ಮೂರು ಕರುಗಳು ಅಸೌಖ್ಯಕ್ಕೀಡಾಗಿ ಗಂಭೀರ ಸ್ಥಿತಿ ತಲುಪಿದ್ದು, ಇದರಲ್ಲಿ ಒಂದು ಹಸು ಸಾವನ್ನಪ್ಪಿದ ಘಟನೆ ಸೋಮೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಂಡೋಳಿ ಎಂಬಲ್ಲಿ ಸಂಭವಿಸಿದೆ.


ಕೃಷಿಕ ಸಂಜೀವ ಪೂಜಾರಿ ಎಂಬವರು ಮಾ. 08ರಂದು ಮಧ್ಯಾಹ್ನ ಕರಿ ಬಸ್ರಿ ತಳಿಯ ಸೊಪ್ಪನ್ನು ಜಾನುವಾರುಗಳಿಗೆ ಮಲಗಲು ಬೆಡ್ಡಿಂಗ್ ಗೆಂದು ಹಾಕಲಾಗಿತ್ತು. ಆದರೆ ಅದನ್ನೆಲ್ಲ ತಿಂದ ಹಸುಗಳು ನಂತರ ಅಸ್ವಸ್ಥಗೊಂಡಿದೆ. ಸಂಜೆ ನಂತರ ಹಸುಗಳು ಕೆಲವು ಮಲಗಿದ್ದಲ್ಲೇ ಬಿದ್ದು, ಕಾಲುಗಳನ್ನು ನೆಲಕ್ಕೆ ಹೊಡೆಯುವ ರೀತಿಯಲ್ಲಿ ವರ್ತಿಸುತಿತ್ತು ಎನ್ನಲಾಗಿದೆ. ಕೋಟೆಕಾರು ಪಶು ವೈದ್ಯಾಧಿಕಾರಿ ಡಾ. ಗಜೇಂದ್ರ ಕುಮಾರ್ ಪಿ.ಕೆ ನೇತೃತ್ವದಲ್ಲಿ ಚಿಕಿತ್ಸೆ ನಡೆಸಲಾಗುತ್ತಿದೆ.

Also Read  ಕೊರೋನಾ ಪ್ರಕರಣ ತೀವ್ರ ಹೆಚ್ಚಾದಲ್ಲಿ ಶಾಲಾ- ಕಾಲೇಜು ಬಂದ್ ಗೆ ಸಿದ್ದ ➤ ಸಚಿವ ಬಿ.ಸಿ ನಾಗೇಶ್

error: Content is protected !!
Scroll to Top