(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 09. ಹೊಟ್ಟೆ ನೋವು ಅಂತ ಕರೆದುಕೊಂಡು ಬಂದಿದ್ದ ಮಗು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ಆರೋಪಿಸಿದ ಪೋಷಕರು, 6 ತಿಂಗಳ ಮಗುವಿಗೆ ಒವರ್ ಡೋಸ್ ಮಾಡಿ ವೈದ್ಯರು ಸಾಯಿಸಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ ಘಟನೆ ವರದಿಯಾಗಿದೆ.
ವೇಣುಗೋಪಾಲ್ ಪ್ರಿಯಾಂಕ ಎಂಬವರ ಮಗುವಿಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆ ಒವಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಕಳೆದ 15 ದಿನಗಳಿಂದ ಹೊಟ್ಟೆ ನೋವಿಗೆ ಚಿಕಿತ್ಸೆ ವೈದ್ಯರು ನೀಡುತ್ತಿದ್ದರು.
