ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ➤ ಆರೋಪಿಯನ್ನು ಕರೆತಂದು ಸ್ಥಳ ಮಹಜರು ನಡೆಸಿದ ಎನ್ಐಎ

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಮಾ. 09. ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಶಾರಿಕ್‌ ನನ್ನು ಎನ್‌ಐಎ ತಂಡವು ಶಿವಮೊಗ್ಗಕ್ಕೆ ಕರೆತಂದು ಸ್ಥಳ ಮಹಜರು ನಡೆಸಿದೆ.

ಆತನ ಜೊತೆ ಶಿವಮೊಗ್ಗದ ಪ್ರೇಮಚಂದ್ ಹಾಗೂ ಚಾಕು ಇರಿತ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಜಬೀವುಲ್ಲಾನನ್ನೂ ಕರೆ ತಂದು ಸ್ಥಳ ಮಹಜರು ಮಾಡಲಾಗಿದೆ. ಇವರಿಬ್ಬರು ತುಂಗಾ ನದಿ ತೀರದಲ್ಲಿ ‘ಟ್ರಯಲ್ ಬ್ಲಾಸ್ಟ್’ ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದು, ಅವರನ್ನು ಸರ್ಕಾರಿ ಬಸ್ ನಿಲ್ದಾಣ ಮತ್ತು ಅದರ ಬಳಿ ಇರುವ ಬ್ರೈಟ್ ಹೊಟೇಲ್ ಬಳಿ ಕರೆದೊಯ್ದು ಮಹಜರು ಮಾಡಿದ್ದಾರೆ. ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದ ಶಾರಿಕ್ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ. ಇದೀಗ ಗುಣಮುಖನಾಗಿರುವ ಶಾರಿಕ್‌ನನ್ನು ಎನ್‌ಐಎ ತಂಡವು ಮಾ. 06ರಂದು ಬೆಂಗಳೂರಿನ ವಿಶೇಷ ಎನ್‌ಐಎ ಕೋರ್ಟ್ ಮುಂದೆ ಹಾಜರುಪಡಿಸಿ, 10 ದಿನಗಳ ಅವಧಿಗೆ ತನ್ನ ವಶಕ್ಕೆ ಪಡೆದು, ತನಿಖೆ ಚುರುಕುಗೊಳಿಸಿದೆ.

Also Read  ಕರಿ ಚಿರತೆ ಕೊನೆಗೂ ಬೋನಿಗೆ

error: Content is protected !!
Scroll to Top