ನನ್ನ ಸಾಧನೆಗೆ ಡಾ.ರಾಜ್ ಕುಮಾರ್ ಕುಟುಂಬ ಕಾರಣ ➤ ನಟಿ ರಮ್ಯಾ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 09. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪಾಲಿಕೆ ಅಧಿಕಾರಿ ಮತ್ತು ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಮಹಿಳಾ ದಿನಾಚರಣೆಯಲ್ಲಿ ಸಾಧಕಿಯರಿಗೆ ದಿಟ್ಟ ಮಹಿಳಾ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ನಟಿ ರಮ್ಯಾ, ‘ನನ್ನ ಸಾಧನೆಗೆ ಡಾ.ರಾಜ್‌ಕುಮಾರ್ ಕುಟುಂಬ ಕಾರಣ. ನಾನು ಮಾಡಿದ ಕೆಲಸದಿಂದ ಇತರರಿಗೆ ಒಳ್ಳೆಯದಾದರೆ ಸಾಕು ಎಂಬ ಭಾವನೆಯಿಂದ ರಾಜಕೀಯ ಹಾಗೂ ಚಲನಚಿತ್ರ ರಂಗದಲ್ಲಿ ಸೇವೆ ಮಾಡಿದ್ದೇನೆ’ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿಬಿಎಂಪಿ ಆಡಳಿತಾದಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತರಾದ ಜಯರಾಮ್ ರಾಯಪುರ, ಹರೀಶ್, ತ್ರಿಲೋಕ್ ಚಂದ್ರ, ಪ್ರೀತಿ ಗಣೇಶ್, ಪಲ್ಲವಿ, ಐಪಿಎಸ್ ಅಧಿಕಾರಿ ಶೋಭರಾಣಿ ಹಾಗ ನಿರೂಪಕಿ ಅರ್ಪಣಾ ಭಾಗವಹಿಸಿದ್ದರು.

Also Read  ಯುಪಿ ಜೈಲಿನಲ್ಲಿರುವ ರೌಫ್ ಶರೀಫ್ ರಿಗೆ ಸೂಕ್ತ ಚಿಕಿತ್ಸೆ ಹಾಗೂ ಶೀಘ್ರ ಬಿಡುಗಡೆಗೆ ಒತ್ತಾಯ ➤ ಕ್ಯಾಂಪಸ್ ಫ್ರಂಟ್ ವತಿಯಿಂದ ಪ್ಲೇಕಾರ್ಡ್ ಪ್ರದರ್ಶನ

error: Content is protected !!
Scroll to Top