ಬರಮೇಲು-ಕೊೖಲ ಶಿರಾಡಿ ಹಾಗೂ ಸಹಪರಿವಾರ ದೈವಗಳ ನೇಮೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಜ.02. ಪುತ್ತೂರು ತಾಲೂಕು ಕೊೖಲ ಗ್ರಾಮದ ಕೊೖಲ-ಬರಮೇಲು ಶ್ರೀ ಶಿರಾಡಿ ಹಾಗೂ ಸಹಪರಿವಾರ ದೈವಗಳ ನೇಮೋತ್ಸವ ಭಾನುವಾರ ಹಾಗೂ ಸೋಮವಾರ ನಡೆಯಿತು.

ಗೊನೆ ಮಹೋರ್ತ, ನೂಜಿಮಾರಿನಲ್ಲಿ ದೈವಗಳಿಗೆ ತಂಬಿಲ, ನಡೆದು ಭಾನುವಾರ ಬೆಳಿಗ್ಗೆ ದೈವಸ್ಥಾನದಲ್ಲಿ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ಗಣಪತಿ ಹೋಮ, ದೈವಗಳಿಗೆ ಪರ್ವ, ಮಹಾಪುಜೆ, ಪ್ರಸಾದ ವಿತರಣೆ, ಬಾಳೆ ಹಾಕುವ ಗದ್ದೆಯಲ್ಲಿರುವ ನಾಗನ ಕಟ್ಟೆಯಲ್ಲಿ ನಾಗತಂಬಿಲ ನಡೆಯಿತು. ಸಂಜೆ ಶ್ರೀ ಶಿರಾಡಿ, ಶ್ರೀ ಪಂಜುರ್ಲಿ, ಮತ್ತು ಮೊಗೇರ ದೈವಗಳ ಭಂಡಾರ ತೆಗೆದು ರಾತ್ರಿ ಅನ್ನಸಂತರ್ಪಣೆ ಬಳಿಕ ಶ್ರೀ ಪಂಜುರ್ಲಿ ಹಾಗೂ ಶ್ರೀ ಮೊಗೇರ ದೈವಗಳ ನೇಮೋತ್ಸವ ನಡೆಯಿತು. ಸೋಮವಾರ ಬೆಳಿಗ್ಗೆ ಶ್ರೀ ಶಿರಾಡಿ ದೈವದ ನೇಮೋತ್ಸ ಪ್ರಾರಂಭಗೊಂಡು ಮಧ್ಯಾಹ್ಮ ಬಟ್ಟಲು ಕಾಣಿಕೆ, ಬಳಿಕ ಅನ್ನಸಂತರ್ಪಣೆ ನಡೆದು ಬಿಂದಾರ್ಪಣೆ ನಡೆಯಿತು. ಸಂಜೆ ಗುಳಿಗ ದೈದ ನುಡಿಗಟ್ಟು ಆದ ಬಳಿಕ ವಳಕಡಮ ಕುಮಾರಧಾರ ನದಿತಟದವರೆಗೆ ಊರ ಮಾರಿ ಅಟ್ಟುವ ಕಾರ್ಯ ನಡೆಯಿತು.
ಈ ಸಂದರ್ಭದಲ್ಲಿ ದೈವದ ಆಡಳಿತ ಸಮಿತಿಯ ಗೌರವಾಧ್ಯಕ್ಷ ಶ್ರೀಧರ ರಾವ್, ಅಧ್ಯಕ್ಷ ವೀರಪ್ಪ ದಾಸಯ್ಯ, ಪ್ರಧಾನ ಅರ್ಚಕ ವೆಂಕಟ್ರಮಣ ಕುದುರೆತ್ತಾಯ, ಕಾರ್ಯದರ್ಶಿ ಬಿ.ಉಮೇಶ್ ಗೌಡ, ಉಪಾಧ್ಯಕ್ಷರಾದ ಕುಶಾಲಪ್ಪ ಬರಮೇಲು, ಅಣ್ಣು ಗೌಡ ಆನೆಗುಂಡಿ, ಶೀನಪ್ಪ ಗೌಡ ವಳಕಡಮ, ಖಜಾಂಜಿ ನ್ಯಾಯವಾದಿ ರವಿಕಿರಣ್ ಕೊೖಲ, ಜತೆ ಕಾರ್ಯದರ್ಶಿ ಎನ್.ಮೋನಪ್ಪ ಗೌಡ, ಸಮಿತಿ ಇತರ ಪದಾಧಿಕಾರಿಗಳಾದ ಚಂದ್ರಶೇಖರ ಪೆರ್ಲ, ಮೋನಪ್ಪ ಗೌಡ ವೈಪಾಲ್, ಕುಂಞಣ್ಣ ಗೌಡ ಪಾಜಳಿಕೆ, ಜಗನ್ನಾಥ ಶೆಟ್ಟಿ ಕಾರೆಗುಡ್ಡೆ, ವಿನೋಧರ ಗೌಡ ಮಾಳ, ಬಾಬು ಮುಗೇರ ಮರ್ವದಗುರಿ, ಹೊನ್ನಪ್ಪ ಗೌಡ ಮುಂಡೈಮಾರ್, ಬಾಬು ಗೌಡ ನೂಜಿಮಾರ್, ಸಂಜೀವ ಗೌಡ ಕೊನೆಮಜಲು, ಆನಂದ ಗೌಡ ಪುತ್ಯೆ, ವಿಶ್ವನಾಥ ಭಟ್ ನೂಜಿ, ಸುಂದರ ವಳಕಡಮ, ಕೊೖಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ ಬೇಂಗದಪಡ್ಪು, ಆತೂರು ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಲಿಂಗಪ್ಪ ಗೌಡ, ಕಾರ್ಯದರ್ಶಿ ಶಾಂತಾರಾಮ ಗೌಡ, ಉಪನ್ಯಾಸಕ ಚೇತನ್ ಆನೆಗುಂಡಿ ಮೊದಲಾದವರು ಉಪಸ್ಥಿತರಿದ್ದರು.

Also Read  ಇಂದಿನ ಪ್ರಮುಖ ಸುದ್ದಿಗಳು (ಡಿಸೆಂಬರ್ 14)

 

error: Content is protected !!
Scroll to Top