ಅತಿಯಾದ ಇಯರ್ ಫೋನ್ ಬಳಕೆಯಿಂದ ಕಿವುಡುತನ ➤ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್ ಧನಂಜಯ್

(ನ್ಯೂಸ್ ಕಡಬ) newskadaba.com. ಮಾ 9. ಮಂಡ್ಯ  ಇತ್ತೀಚಿನ ದಿನಗಳಲ್ಲಿ ಮೊಬೈಲ್ ಮತ್ತು ಇಯರ್ ಫೋನ್ ಗಳ  ಅತಿಯಾದ ಬಳಕೆಯಿಂದ ಕಿವುಡುತನ ಕಾಣಿಸಿಕೊಳ್ಳುತ್ತಿದೆ. ಹೆಚ್ಚಾಗಿ ಹದಿಹರೆಯದವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ಜಿಲ್ಲಾ ಆರೋಗ್ಯಧಿಕಾರಿ ಡಾ. ಟಿ. ಎನ್ .ಧನಂಜಯ ಆತಂಕ ವ್ಯಕ್ತಪಡಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ರಾಷ್ಟ್ರೀಯ ಶ್ರವಣದೋಷ ತಡೆ ಹಾಗೂ ನಿಯಂತ್ರಣ ಕಾರ್ಯಕ್ರಮ  ಯೋಜನೆಯಡಿ ನಗರದ ಡಿ ಎಚ್ ಒ ಕಚೇರಿ ಆವರಣದಲ್ಲಿ ಅಯೋಜಿಸಿದ್ದ ವಿಶ್ವ ಶ್ರವಣ ದಿನಾಚರಣೆ ಅಂಗವಾಗಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಜಿಲ್ಲೆಯಲ್ಲಿ 4509 ಜನರು ಶ್ರವಣದೋಷವುಳ್ಳವರಿದ್ದಾರೆ. 6 ವರ್ಷದೊಳಗಿನ ಶ್ರವಣದೋಷವುಳ್ಳ ಮಕ್ಕಳನ್ನು ಪತ್ತೆಮಾಡಿ ಮಾತು ಮತ್ತು ಶ್ರವಣ ತರಬೇತಿಗೆ ಒಳಪಡಿಸಿ ಹೆಚ್ಚಿನ ಚಿಕಿತ್ಸೆಗೆ ಕ್ಲಾಕಿಯರ್ ಇಂಫ್ಲಾಂಟ್ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ಪ್ರಸ್ತುತ ಸಾಲಿನಲ್ಲಿ 28 ಮಕ್ಕಳನ್ನು ಗುರುತಿಸಲಾಗಿದೆ ಎಂದು ಹೇಳಿದರು. ಆಶ್ರಿತ ರೋಗವಾಹಕಗಳ ನಿಯಂತ್ರಣಾಧಿಕಾರಿ ಡಾ. ಭವಾನಿಶಂಕರ್, ಡಿಇಐಸಿ ವ್ಯವಸ್ಥಾಪಕ ವಿನೋಧಿನಿ, ಮರಿಸ್ವಾಮಿ, ಲೋಕೇಶ್, ನೇಹಾ ಉಪಸ್ಥಿತರಿದ್ದರು.

error: Content is protected !!
Scroll to Top