ಬಿಸಿಲಿನ ಕಾವು ಹೆಚ್ಚಳದ ಸಾಧ್ಯತೆ ➤ ದ.ಕ ಜಿಲ್ಲಾಧಿಕಾರಿಯಿಂದ ಆರೋಗ್ಯ ರಕ್ಷಣೆಗೆ ಮಾರ್ಗಸೂಚಿ ಪ್ರಕಟ

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.09. ಕಳೆದ ಕೆಲ ದಿನಗಳಿಂದ ಬಿಸಿಲಿನ ಕಾವು ಹೆಚ್ಚಾಗಿದೆ. ವೈರಲ್ ಜ್ವರಗಳು ಕೂಡ ಹೆಚ್ಚಳವಾಗಿದೆ. ಬೇಸಿಗೆಯಲ್ಲಿ ಆಹಾರ ಮತ್ತು ನೀರಿನ ಮೂಲಕ ಹೆಚ್ಚಾಗಿ ರೋಗಗಳು ಹರಡುತ್ತದೆ.


ಇದರಿಂದಾಗಿ ಉಪಾಹಾರ ಗೃಹಗಳು, ಕ್ಯಾಂಟೀನ್ಗಳು, ಹೊಟೇಲ್ಗಳು, ಬಾರ್ಗಳು, ಬೇಕರಿಗಳಿಗೆ ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಜಿಲ್ಲಾಧಿಕಾರಿ ರವಿಕುಮಾರ್ ಸೂಚನೆಯನ್ನು ಹೊರಡಿಸಿದ್ದಾರೆ.


ಹೊಟೇಲ್ಗಳಲ್ಲಿ ಆಹಾರ ಅಥವಾ ಅಡುಗೆ ತಯಾರಕರು ವೈಯಕ್ತಿಕ ಶುಚಿತ್ವ ಖಚಿತ ಪಡಿಸಿಕೊಳ್ಳಬೇಕು. ಅನಾರೋಗ್ಯದ ವೇಳೆ ಆಹಾರವನ್ನು ತಯಾರಿಸುವ, ಸರಬರಾಜು ಮಾಡುವ ಮತ್ತು ಬಡಿಸುವ ಕಾರ್ಯ ಮಾಡಬಾರದು.

Also Read  KSRTC ಬಸ್ಸಿಗೆ ದ್ವಿಚಕ್ರ ವಾಹನ ಮುಖಾಮುಖಿ ಢಿಕ್ಕಿ‌ ➤ ಚಾಲಕ ಪ್ರಾಣಾಪಾಯದಿಂದ ಪಾರು

 

error: Content is protected !!
Scroll to Top