(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 09. ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಹಿರಿಯ ಗೃಹರಕ್ಷಕಿಯರಾದ ಶ್ರೀಮತಿ ಕಮಲಾ, ಮೆಟಲ್ ಸಂಖ್ಯೆ 925, ಶ್ರೀಮತಿ ಸುಮಿತ್ರಾ, ಮೆಟಲ್ ಸಂಖ್ಯೆ 145, ಹಾಗೂ ರಂಜನಿ, ಮೆಟಲ್ ಸಂಖ್ಯೆ 924 ಇವರನ್ನು ಜಿಲ್ಲಾ ಗೃಹರಕ್ಷಕ ದಳ, ಮೇರಿಹಿಲ್, ಮಂಗಳೂರು ಕಛೇರಿಯಲ್ಲಿ ಸನ್ಮಾನಿಸಲಾಯಿತು.
ಬಳಿಕ ಮಾತನಾಡಿದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದÀ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು, ವಿಶ್ವ ಮಹಿಳಾ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಒಬ್ಬ ಮಗುವಿನ ವ್ಯಕ್ತಿತ್ವ ರೂಪಿಸಲು ತಾಯಿ ಬೇಕು. ಗಂಡನ ಯಶಸ್ಸಿಗೆ ಹೆಂಡತಿ ಅನಿವಾರ್ಯ ಮತ್ತು ಮನೆಯ ಶಾಂತಿ ಮತ್ತು ನೆಮ್ಮದಿ ವಾತಾವರಣಕ್ಕೆ ಮಹಿಳೆ ಅತೀ ಅಗತ್ಯ. ಹೀಗೆ ಒಬ್ಬ ಮಹಿಳೆ ಅಮ್ಮನಾಗಿ, ಸಹೋದರಿಯಾಗಿ, ಪತ್ನಿಯಾಗಿ, ಸೊಸೆಯಾಗಿ ಪುರುಷರ ಜೀವನದಲ್ಲಿ ಬಹು ಮುಖ್ಯ ಭೂಮಿಕೆ ವಹಿಸುತ್ತಾರೆ. ಮಹಿಳೆ ದೈಹಿಕವಾಗಿ ಪುರುಷರಿಗಿಂv ಬಲಾಢ್ಯವಲ್ಲದಿದ್ದರೂ, ಮಾನಸಿಕವಾಗಿ ಮಹಿಳೆ ಪುರುಷರಿಗಿಂತಲೂ ಬಲಶಾಲಿ, ಒತ್ತಡದ ಸನ್ನಿವೇಶವನ್ನು ನಿಭಾಯಿಸುವಲ್ಲಿ ಮಹಿಳೆ ಹೆಚ್ಚು ಯಶಸ್ವಿಯಾಗುತ್ತಾರೆ. ಒಂದು ಪರಿಪೂರ್ಣ ಮನೆ, ಕುಟುಂಬ, ಸಮಾಜ, ನಾಡು ಮತ್ತು ದೇಶ ಕಟ್ಟಬೇಕಾದಲ್ಲಿ ಮಹಿಳೆ ಅನಿವಾರ್ಯಳು. ತಮ್ಮ ಕುಟುಂಬ ನಿರ್ವಹಣೆ ಜೊತೆಗೆ ಗೃಹರಕ್ಷಕಿಯಾಗಿ ಕೆಲಸ ಮಾಡಿ ಸಮಾಜದ ಸ್ವಾಸ್ಥಕಾಪಾಡುವ ಮಹಿಳಾ ಗೃಹರಕ್ಷಕಿಯರ ಕೊಡುಗೆ ಅತೀಅಮೂಲ್ಯ ಎಂದು ನುಡಿದರು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಗಳೂರು ನಗರದ ಚೀಫ್ ಟ್ರಾಫಿಕ್ ವಾರ್ಡನ್ ಶ್ರೀ ಸುರೇಶ್ ನಾಥ್ ಅವರು ಮಾತನಾಡಿ, “ಮಹಿಳೆ ಎನ್ನುವುದು ತಾಳ್ಮೆಯ ಪ್ರತಿರೂಪ” ಒಂದು ದಿನದಲ್ಲಿ ಮಹಿಳೆ ನಿರ್ವಹಿಸುವ ಕೆಲಸ ಪುರುಷನಿಂದ ಸಾಧ್ಯವಿಲ್ಲ. ಒಬ್ಬ ಪುರುಷ ಪರಿಪೂರ್ಣನಾಗಬೇಕಾದರೆ ಮಹಿಳೆ ಅನಿವಾರ್ಯ ಎಂದು ನುಡಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪರಿಸರವಾದಿ ಮಾದವ ಉಳ್ಳಾಲ ಅವರು ಎಲ್ಲಾ ಗೃಹರಕ್ಷಕಿಯರಿಗೆ ಮಹಿಳಾ ದಿನಾಚರಣೆಯ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಕಛೇರಿಯ ಅಧೀಕ್ಷಕಿಯಾದ ಶ್ರೀಮತಿ ಕವಿತಾ ಕೆ.ಸಿ, ಪ್ರಥಮದರ್ಜೆ ಸಹಾಯಕಿಯಾದ ಅನಿತಾ ಟಿ.ಎಸ್. ದಲಾಯತ್ ಮೀನಾಕಿ,್ಷ ಬೆಳ್ಳಾರೆ ಘಟಕದ ಪ್ರಭಾರ ಘಟಕಾಧಿಕಾರಿಯಾದ ಶ್ರೀ ವಸಂತ್ ಕುಮಾರ್, ಹಾಗೂ ಗೃಹರಕ್ಷಕ/ಗೃಹರಕ್ಷಕಿಯರು ಉಪಸ್ಥಿತರಿದ್ದರು.