➤ ಹಲವು ವರ್ಷಗಳ ನಂತರ, ಆಂಧ್ರ ಪ್ರದೇಶದ ನಲ್ಲಮಲ ಅರಣ್ಯದಲ್ಲಿ ಭಾರತೀಯ ತೋಳಗಳು ಪತ್ತೆ!

(ನ್ಯೂಸ್ ಕಡಬ) newskadaba.com. ಓಂಗೋಲು, ಮಾ 7.  ಅಳಿವಿನಂಚಿನಲ್ಲಿರುವ ಭಾರತೀಯ ತೋಳಗಳು ಬರೊಬ್ಬರಿ 10 ವರ್ಷಗಳ ಬಳಿಕ ಆಂಧ್ರ ಪ್ರದೇಶದ ಅರಣ್ಯ ಪ್ರದೇಶದಲ್ಲಿ  ಕಾಣಿಸಿಕೊಂಡಿವೆ.

ಆಂಧ್ರ ಪ್ರದೇಶದ ನಲ್ಲಮಲ ಅರಣ್ಯ ವಲಯದ ಅರಣ್ಯಾಧಿಕಾರಿಗಳು ಇತ್ತೀಚೆಗೆ ದೋರ್ನಾಳ-ಆತ್ಮಕೂರು ಗಡಿ ಪ್ರದೇಶದಲ್ಲಿ ಅಳಿವಿನಂಚಿನಲ್ಲಿರುವ ಭಾರತೀಯ ತೋಳಗಳನ್ನು ಪತ್ತೆ ಮಾಡಿದ್ದಾರೆ. ಸುಮಾರು ಒಂದು ದಶಕದ ನಂತರ ಈ ವಿಶೇಷ ವನ್ಯಜೀವಿ ಕಾಣಿಸಿಕೊಂಡಿರುವುದು ಅರಣ್ಯಾಧಿಕಾರಿಗಳು ಮತ್ತು ವನ್ಯಜೀವಿ ಪ್ರಿಯರಲ್ಲಿ ಹರ್ಷವನ್ನು ತಂದಿದೆ. ಒಂದು ತಿಂಗಳ ಹಿಂದೆ, ರೊಳ್ಳಪಾಡು ಅರಣ್ಯ ಪ್ರದೇಶದಲ್ಲಿ ತೋಳಗಳ ಗುಂಪನ್ನು ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಹಿಡಿಯಲಾಗಿತ್ತು. ಕೆಲವು ದಿನಗಳ ಹಿಂದೆ, ಮತ್ತೊಂದು ಹಿಂಡು ದೋರ್ನಾಳ-ಆತ್ಮಕೂರು ಶ್ರೀಶೈಲಂ ಅರಣ್ಯ ಪ್ರದೇಶದ ಬಳಿ ಕಾಣಿಸಿಕೊಂಡಿತ್ತು.

error: Content is protected !!
Scroll to Top